ಬಂಟ್ವಾಳ, ಸೆ 11 (DaijiworldNews/SM): ಕಾಲೇಜೊಂದರಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬ್ಬಡಿ ಪಂದ್ಯಾಟದ ವೇಳೆ ವಿದ್ಯಾರ್ಥಿಗಳಲ್ಲದವರನ್ನು ತಂಡದಲ್ಲಿ ಆಟ ಆಡಿಸಲು ಯತ್ನಿಸಿ ಪಂದ್ಯಾಟದ ಆಯೋಜನೆಯ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಈ ಕಾರಣಕ್ಕಾಗಿ ಬಂಟ್ವಾಳ ದ ಪ್ರತಿಷ್ಠಿತ ಕಾಲೇಜು ಎಂದು ಕರೆಸಿಕೊಂಡಿರುವ ಎಸ್.ವಿ.ಎಸ್.ಕಾಲೇಜು ತಂಡವನ್ನು ಪಂದ್ಯಾವಳಿಯಿಂದ ಹೊರಗಟ್ಟಿದ ಘಟನೆ ನಡೆದಿದೆ.
ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ ಸಿದ್ದಕಟ್ಟೆ ಗುಣ ಶ್ರೀ ವಿದ್ಯಾಲಯದಲ್ಲಿ ನಡೆದ ವೇಳೆ ಈ ಘಟನೆ ನಡೆದಿದೆ.
ದ.ಕ.ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಯ ಉಪನಿರ್ದೇಶಕರ ಕಚೇರಿ ಮೂಲಕ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ.ಅಂಕ ಪಟ್ಟಿ ಆಧಾರದಲ್ಲಿ ಪರಿಶೀಲಿಸಿದಾಗ ಕಾಲೇಜಿನ ವಿದ್ಯಾರ್ಥಿಗಳೇ ಅಲ್ಲ ಎಂದು ದೃಡಪಟ್ಟ ಕಾರಣ ತಂಡವನ್ನು ಅನರ್ಹಗೊಳಿಸಲಾಗಿದೆ.
ಬಂಟ್ವಾಳ ಎಸ್.ವಿ.ಎಸ್. ಹಾಗೂ ಅಳಿಕೆ ತಂಡಗಳ ಮಧ್ಯೆ ಪಂದ್ಯಾಟ ನಡೆದಿದ್ದು, ಈ ಪಂದ್ಯದಲ್ಲಿ ಸೋತ ಅಳಿಕೆ ತಂಡ ಎದುರಾಳಿ ತಂಡದ ಆಟಗಾರರು ಹೊರಗಿವನರು ಎಂದು ಆಕ್ಷೇಪ ತೆಗೆದಿದೆ. ಈ ವೇಳೆ ವಿದ್ಯಾರ್ಥಿಗಳ ಸ್ಯಾಟ್ಸ್ ಸಂಖ್ಯೆಯನ್ನು ಪರಿಶೀಲಿಸಿದಾಗ ಐವರು ವಿದ್ಯಾರ್ಥಿಗಳ ಸಂಖ್ಯೆ ಹೊಂದಾಣಿಕೆ ಬಂದಿಲ್ಲ. ಈ ಕಾರಣಕ್ಕೆ ಉಪನಿರ್ದೇಶಕರು ತಂಡವನ್ನು ಅನರ್ಹಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.