ಕಾಸರಗೋಡು, ಸೆ 11 (DaijiworldNews/HR): ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಉದ್ಯಾವರದಲ್ಲಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ರ್ಯಾಲಿಗೆ ಹೋರಾಟ ಸಮಿತಿ ಅಧ್ಯಕ್ಷ ಸೈಫುಲ್ಲಾ ತಂಘಳ್ ಚಾಲನೆ ನೀಡಿದರು. ಪ್ರತಿಭಟನೆಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಜೀನ್ ಲವೀನಾ ಮೊಂತೆರೋ, ಎಸ್.ಎಂ.ಬಶೀರ್, ಸಂಜೀವ ಶೆಟ್ಟಿ, ದಯಾಕರ ಮಾಡ, ಅಶ್ರಫ್ ಬಡಾಜೆ ಮೊದಲಾದವರು ನೇತೃತ್ವ ನೀಡಿದರು.
ಕುಂಜತ್ತೂರು ಹಾಗೂ ಉದ್ಯಾವರ 10ನೇ ಮೈಲಿನಲ್ಲಿ ಅಂಡರ್ಪಾಸ್, ಶಿಕ್ಷಣ ಸಂಸ್ಥೆಗಳಿರುವ ಪರಿಸರದಲ್ಲಿ ಫುಟ್ ಓವರ್ ಬ್ರಿಡ್ಜ್, ಸರ್ವೀಸ್ ರಸ್ತೆ ಕಾಮಗಾರಿ ಮೊದಲು ಮುಗಿಸಿ, ಆಟೋರಿಕ್ಷಾ, ಜೀಪ್, ಟ್ಯಾಕ್ಸಿ ನಿಲ್ದಾಣ, ಬಸ್ ವೈಟಿಂಗ್ ಶೆಲ್ಟರ್ ಹಾಗೂ ಫುಟ್ಪಾತ್ ನಿರ್ಮಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಯಿತು.
ಇನ್ನು ತೂಮಿನಾಡಿನಿಂದ ಆರಂಭವಾದ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆ ಯ ಪ್ರತಿ ಭಟನಾ ಕಾರರು ಪಾಲ್ಗೊಂಡಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶಾಸಕರು ಮುನ್ನೆಚ್ಚರಿಕೆ ನೀಡಿದರು.