ಮಂಗಳೂರು/ಉಡುಪಿ, ಸೆ 11 (DaijiworldNews/DB): ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಳೆ ಹಿನ್ನೆಲೆಯಲ್ಲಿ ಸೆಪ್ಟಂಬರ್ 11 ಮತ್ತು12ರಂದು (ಇಂದು ಮತ್ತು ನಾಳೆ) ಭಾರತೀಯ ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್ ಘೋಷಿಸಿದೆ.
ಎರಡೂ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗು ಸಾಧ್ಯತೆ ಇದೆ. ಅಲ್ಲದೆ ಗಾಳಿ ಮತ್ತು ಸಮುದ್ರದ ಅಬ್ಬರವೂ ಹೆಚ್ಚಿರುವ ಸಾಧ್ಯತೆ ಇರುವುದರಿಂದ ಉಭಯ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಜಿಲ್ಲೆಯ ವಿವಿಧೆಡೆ ಶನಿವಾರ ಹಗಲು, ರಾತ್ರಿ ಆಗಾಗ ಮಳೆಯಾಗಿದ್ದು, ಭಾನುವಾರ ಬೆಳಗ್ಗೆಯೂ ಮಳೆ ಸುರಿದಿತ್ತು.