ಉಡುಪಿ, ಸೆ 10 (DaijiworldNews/SM): ಇಲ್ಲಿನ ಮನೆಯೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಉಡುಪಿಯ ಎಲ್ಎಲ್ಆರ್ ರಸ್ತೆ ಕುಂಜಿಬೆಟ್ಟು ನಿವಾಸಿ ವೈಷ್ಣವಿ ಮಡಿ ಎಂಬುವರು ದಾಖಲಿಸಿರುವ ದೂರಿನ ಪ್ರಕಾರ, ಇಡೀ ಕುಟುಂಬ ನೇಪಾಳಕ್ಕೆ ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸೆಪ್ಟೆಂಬರ್ 09 ರಾತ್ರಿಯಿಂದ ಸೆಪ್ಟೆಂಬರ್ 10 ರ ಬೆಳಿಗ್ಗೆಯೊಳಗೆ ಖದೀಮರು ಅವರ ಮನೆಗೆ ನುಗ್ಗಿದ್ದಾರೆ.
ಮನೆಯಲ್ಲಿದ್ದ 500 ಗ್ರಾಂ ಬೆಳ್ಳಿ ಪೀಠ, 50 ಗ್ರಾಂ ಬೆಳ್ಳಿ ತಟ್ಟೆ, 150 ಗ್ರಾಂ ಬೆಳ್ಳಿಯ ಬಟ್ಟಲು, 20 ಗ್ರಾಂ ಬೆಳ್ಳಿಯ ಬಟ್ಟಲು, 25 ಗ್ರಾಂ ಬೆಳ್ಳಿಯ ಗಣೇಶ ಪೀಠ, ಸಿಸಿಟಿವಿ ಡಿವಿಆರ್, ವೈಫೈ ರೂಟರ್ ಕಳ್ಳತನವಾಗಿದೆ. ಕಳವಾದ ಸೊತ್ತು ಒಟ್ಟು 64,000 ರೂ. ಎನ್ನಲಾಗಿದೆ.
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.