ಉಳ್ಳಾಲ, ಸೆ 10 (DaijiworldNews/HR): ಉಳ್ಳಾಲ ತಾಲೂಕಿನ ಕೋಟೆಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಳವಡಿಸಲಾಗಿದ್ದ ಇಂಟರ್ನೆಟ್ ಆಧಾರಿತ ಸಿಸಿಟಿವಿಯನ್ನು ಲಾರಿಯೊಂದು ಹೊಡೆದು ಹಾಕಿದೆ.
ಈ ಸಿಸಿ ಟಿವಿಯಿಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದಿದ್ದು, ಈ ಹಿನ್ನಲೆಯಲ್ಲಿ ಅದನ್ನು ಹೊಡೆದು ಹಾಕಲಾಗಿದೆ. ಆ ಲಾರಿಯ ವಿಡಿಯೋ ಹಾಗೂ ಹೊಡೆದುರಳಿಸಲಾದ ಸಿಸಿಟಿವಿಯ ಅವಶೇಷಗಳ ವಿಡಿಯೋ ಹಾಗೂ ಚಿತ್ರಗಳಿದ್ದು, ಈ ಬಗ್ಗೆ ಮಾಹಿತಿ ಇದ್ದವರು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ಕೋರಲಾಗಿದೆ.