ಮಂಗಳೂರು, ಸೆ 10 (DaijiworldNews/HR): 2008 ಅಕ್ಟೋಬರ್ನಲ್ಲಿ ನಕಲಿ ಪಾಸ್ಪೋರ್ಟ್ನಲ್ಲಿ ದುಬೈಗೆ ತೆರಳಲು ಯತ್ನಿಸಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಪತ್ತೆ ಮೇರೆಗೆ ಬಂಧಿಸಿದ್ದಾರೆ.
ಮಮ್ಮುನ್ಹಿ ಅಲಿಯಾಸ್ ಮೊಹಮ್ಮದ್ ಕುಂಞಿ (53) ಕಳೆದ 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿ. ನಿರಂತರವಾಗಿ ವಿಳಾಸ ಬದಲಿಸಿಕೊಂಡು ಕೇರಳದಲ್ಲಿ ತಲೆಮರೆಸಿಕೊಂಡಿದ್ದ.
ಇನ್ನು ಕೇರಳದ ಹೊಸದುರ್ಗ ಜಿಲ್ಲೆಯ ಹರಿಪುರಂ ಪುಲ್ಲೂರು ಎಂಬಲ್ಲಿ ಅಡಗುತಾಣದಿಂದ ಕುಂಞಿಯನ್ನು ಪೊಲೀಸರು ಬಂಧಿಸಿದ್ದಾರೆ.