Karavali
ಮಂಗಳೂರು: ಓಯಸಿಸ್ ಫರ್ಟಿಲಿಟಿ ಸೆಂಟರ್ 3ನೇ ಕೇಂದ್ರ ಮಂಗಳೂರಿನ ಎ ಜೆ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆ
- Fri, Sep 09 2022 09:30:16 PM
-
ಮಂಗಳೂರು, ಸೆ 09 (DaijiworldNews/SM): ಹೈದರಾಬಾದ್ ಮೂಲದ ಓಯಸಿಸ್ ಫರ್ಟಿಲಿಟಿ ಸಂಸ್ಥೆ ತನ್ನ 3 ನೇ ಕೇಂದ್ರವನ್ನು ಮಂಗಳೂರಿನ ಎ.ಜೆ. ಹಾಸ್ಪಿಟಲ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಾರಂಭಿಸುತ್ತಿದೆ.
ಓಯಸಿಸ್ ಫರ್ಟಿಲಿಟಿ ಸಂಸ್ಥೆಯನ್ನು ಪ್ರಸಿದ್ಧ ಸ್ತ್ರೀರೋಗತಜ್ಞರಾದ ಡಾ. ದುರ್ಗಾ ಜಿ. ರಾವ್ ಮತ್ತು ಶ್ರೀ ಕಿರಣ್ ಗಡೇಲಾ ರವರು ಸ್ಥಾಪಿಸಿದ್ದಾರೆ.ಇಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಪಿತೃತ್ವವನ್ನು ಪಡೆಯಲು ಅನುವು ಮಾಡಿಕೊಡುವ ಫಲವತ್ತತೆಯ ಚಿಕಿತ್ಸೆಯನ್ನು ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಮುಂದಿನ 3 ವರ್ಷಗಳಲ್ಲಿ ಭಾರತದಾದ್ಯಂತ ಸುಮಾರು 50 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಮಂಗಳೂರಿನ ಪ್ರಸಿದ್ಧ ಎ.ಜೆ. ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ಅರ್ಹ ದಂಪತಿಗಳಿಗೆ ಸೇವೆಗಳನ್ನು ನೀಡಲು ತನ್ನ ಕಟ್ಟಡದಲ್ಲಿ ವಿಶ್ವ ದರ್ಜೆಯ ಫಲವತ್ತತೆ ಕ್ಲಿನಿಕ್ ಅನ್ನು ಪ್ರಾರಂಭಿಸಲು ಅನುವು ನೀಡಿ ಓಯಸಿಸ್ ಫರ್ಟಿಲಿಟಿಯೊಂದಿಗೆ ಕೈಜೋಡಿಸಿದೆ. ಈ ಪರಿಸರದಲ್ಲಿ ಇಂತಹ ಮಾದರಿಯ ಚಿಕಿತ್ಸಾ ಸೌಲಭ್ಯದ ಕೊರತೆಯಿದ್ದು ಈ ಚಿಕಿತ್ಸೆಗಾಗಿ ವಿದೇಶದಿಂದಲೂ ದಂಪತಿಗಳು ಬರುತ್ತಾರೆ. ಇದೀಗ ಎ.ಜೆ. ಆಸ್ಪತ್ರೆಯಲ್ಲಿರುವ ಓಯಸಿಸ್ ಫರ್ಟಿಲಿಟಿ ಸೆಂಟರ್ ಪೂರ್ಣ ಪ್ರಮಾಣದ ಫಲವತ್ತತೆಯ ಚಿಕತ್ಸಾ ಕೇಂದ್ರವಾಗಿದ್ದು,ಇಲ್ಲಿ ಸ್ತ್ರೀರೋಗತಜ್ಞರು, ಆಂಡ್ರೊಲಾಜಿಸ್ಟ್ಗಳು, ಭ್ರೂಣಶಾಸ್ತ್ರಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಕ್ಷೇತ್ರದ ಪರಿಣತರ ಬೆಂಬಲದೊಂದಿಗೆ ನೂತನ ತಂತ್ರಜ್ಞಾನದೊಂದಿಗೆ ಚಿಕಿತ್ಸೆ ನೀಡಲಿದೆ.
ಎ.ಜೆ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಅಧ್ಯಕ್ಷರಾಗಿರುವ ಡಾ. ಎ.ಜೆ. ಶೆಟ್ಟಿ, ಓಯಸಿಸ್ ಫರ್ಟಿಲಿಟಿಯ ಸಹ-ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾಗಿರುವ ಡಾ. ದುರ್ಗಾ ಜಿ. ರಾವ್ ಮತ್ತು ಓಯಸಿಸ್ ಫರ್ಟಿಲಿಟಿಯ ವೈಜ್ಞಾನಿಕ ಮುಖ್ಯಸ್ಥರು ಮತ್ತು ಕ್ಲಿನಿಕಲ್ ಎಂಬ್ರಿಯಾಲಜಿಸ್ಟ್ ಡಾ. ಕೃಷ್ಣ ಚೈತನ್ಯ ಅವರು ಈ ಚಿಕಿತ್ಸಾ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿದರು.
ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಓಯಸಿಸ್ ಫರ್ಟಿಲಿಟಿಯ ಸಹ-ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ದುರ್ಗಾ ಜಿ. ರಾವ್, "ನಮ್ಮ ಕೇಂದ್ರವನ್ನು ಮಂಗಳೂರಿನಲ್ಲಿ ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಅನಿಯಮಿತ ಜೀವನಶೈಲಿ, ವಿಳಂಬವಾದ ಪೋಷಕತ್ವ, ಧೂಮಪಾನ, ಮದ್ಯಪಾನ, ಬೊಜ್ಜು, ಮಾಲಿನ್ಯ ಮತ್ತು ಇತರ ಹಲವು ಅಂಶಗಳು, ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ.ಕರ್ನಾಟಕದಲ್ಲಿ ಬಂಜೆತನವು ತೀವ್ರವಾಗಿ ಏರಿದೆ. ಒಟ್ಟು ಫಲವತ್ತತೆ ದರ (ಟಿಎಫ್ಆರ್) 1.7 ಕ್ಕೆ ಕುಸಿದಿರುವುದು ಆತಂಕಕಾರಿ ಪ್ರವೃತ್ತಿಯಾಗಿದೆ. ಇಂದು ಹಲವರು ಅನೇಕ ವೃತ್ತಿ ಆಧಾರಿತ ಯುವಕ-ಯುವತಿಯರು ಅನೇಕ ಕಾರಣಗಳಿಂದ ಮಕ್ಕಳನ್ನು ಹೆರುವುದನ್ನು ಮುಂದೂಡುತ್ತಿರುವ ನೋಡುತ್ತೇವೆ. ಅವರಿಗೆ ಮುಂದೆ ವಯಸ್ಸಾದಂತೆ ಫಲವತ್ತತೆ ಕ್ಷೀಣಿಸುತ್ತದೆ ಎಂಬ ಸತ್ಯದ ಅರಿವಿಲ್ಲ. ಆದರೆ ಇಂದು ಅವರ ಅನುಕೂಲಕ್ಕೆ ತಕ್ಕಂತೆ IVF, IVM, Micro-TESE, ಇತ್ಯಾದಿ ಸುಧಾರಿತ ಫಲವತ್ತತೆಯ ಚಿಕಿತ್ಸೆಗಳು ಲಭ್ಯವಿದ್ದು ಅದು ದಂಪತಿಗಳಿಗೆ ಬಂಜೆತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ."ಎಂದರು.
ಓಯಸಿಸ್ ಫರ್ಟಿಲಿಟಿಯ ವೈಜ್ಞಾನಿಕ ಮುಖ್ಯಸ್ಥ ಮತ್ತು ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞರು ಆಗಿರುವ ಡಾ. ಕೃಷ್ಣ ಚೈತನ್ಯ ಮಾತನಾಡಿ, ಮಂಗಳೂರಿಗೆ ಸಂಸ್ಥೆ ಪ್ರಾರಂಭಿಸಲು ತುಂಬಾ ಸಂತೋಷವಾಗಿದೆ.ಇತ್ತೀಚಿಗಿನ ಕಳಪೆ ಜೀವನಶೈಲಿ, ಮಿತಿಮೀರಿದ ಗ್ಯಾಜೆಟ್ಗಳ ಬಳಕೆ,ಕಡಿಮೆ ನಿದ್ರೆಯ ವಿಧಾನದಿಂದಾಗಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದಕ್ಕೆ ನಮ್ಮ ಸುಧಾರಿತ ಫಲವತ್ತತೆಯ ಚಿಕಿತ್ಸಾ ವಿಧಾನಗಳಾದ MACS, Microfluidics, TESA, Micro-TESE, ಮುಂತಾದ ಕ್ರಮಗಳ ಮೂಲಕ ಪುರುಷರ ಪಿತೃತ್ವವನ್ನು ಸಕ್ರಿಯಗೊಳಿಸುತ್ತಿದ್ದೇವೆ. ಇನ್ನು ನಮ್ಮ IVF ಲ್ಯಾಬ್ಗಳು ವಿಶ್ವ-ದರ್ಜೆಯ ಗುಣಮಟ್ಟವನ್ನು ಹೊಂದಿದ್ದು, ಇದರಿಂದ ಹೆಚ್ಚಿನ IVF ಯಶಸ್ಸಿನ ದರಗಳನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ.
ಮಂಗಳೂರಿನ ಓಯಸಿಸ್ ಫರ್ಟಿಲಿಟಿಯ ಕ್ಲಿನಿಕಲ್ ಸಂಸ್ಥೆಯ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ.ಪ್ರಮೋದ ಲಕ್ಷ್ಮಣ್ ಮಾತನಾಡಿ, ಪಿಸಿಓಎಸ್, ಎಂಡೊಮೆಟ್ರಿಯೊಸಿಸ್, ತಡವಾದ ಪಿತೃತ್ವ, ಒತ್ತಡ ಇತ್ಯಾದಿಗಳು ಮಹಿಳೆಯರ ಫಲವತ್ತತೆಗೆ ಅಡ್ಡಿಯಾಗುತ್ತವೆ. ಒಂದು ವರ್ಷದ ಪ್ರಯತ್ನದ ನಂತರವೂ ಅವರು ಗರ್ಭಿಣಿಯಾಗಲು ಸಾಧ್ಯವಾಗದಿದ್ದರೆ ಫಲವತ್ತತೆ ತಜ್ಞರನ್ನು ಸಂಪರ್ಕಿಸಲು ನಾನು ದಂಪತಿಗಳಿಗೆ ಒತ್ತಾಯಿಸುತ್ತೇನೆ. ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯು ದಂಪತಿಗಳು ತಮ್ಮ ಪಿತೃತ್ವದ ಕನಸನ್ನು ಸಾಧಿಸಲು ಅನುವು ಮಾಡಿ ಕೊಡಲು ನಮ್ಮ ಸಂಸ್ಥೆ ಸದಾ ಸಿದ್ಧವಿದೆ ಎಂದರು"
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಮಾತನಾಡಿ, "ಕರ್ನಾಟಕದಲ್ಲಿ ತಮ್ಮ 3ನೇ ಕೇಂದ್ರವನ್ನು ಪ್ರಾರಂಭಿಸುತ್ತಿರುವ ಓಯಸಿಸ್ ಫರ್ಟಿಲಿಟಿಯೊಂದಿಗೆ ಸಂಬಂಧ ಹೊಂದಲು ತುಂಬಾ ಸಂತೋಷವಾಗಿದೆ. ಓಯಸಿಸ್ ಫರ್ಟಿಲಿಟಿ ಮತ್ತು ಎ.ಜೆ. ಇನ್ಸ್ಟಿಟ್ಯೂಟ್, ಎರಡೂ ಸಾಕಷ್ಟು ಸುಧಾರಿತ ತಂತ್ರ ಜ್ಞಾನ ಗಳನ್ನೊಳಗೊಂಡ ಸಂಸ್ಥೆಯಾಗಿದ್ದು ಇಲ್ಲಿನ ಚಿಕಿತ್ಸೆಗಳನ್ನು ಜನರ ಕೈಗೆಟುಕುವಂತೆ ಸಿಗಲಿದೆ ಎಂದು ನಾವು ನಂಬಿದ್ದೇವೆ. ಓಯಸಿಸ್ ಫರ್ಟಿಲಿಟಿಯೊಂದಿಗೆ ರೋಗಿಯ-ಕೇಂದ್ರಿಕತೆ, ತಾಂತ್ರಿಕ ಸಾಮರ್ಥ್ಯ ಮತ್ತು ಬದ್ಧತೆಯನ್ನು ಹೊಂದಿದ್ದೇವೆ. ಅನೇಕರಿಗೆ ಭರವಸೆ ಮತ್ತು ಸಂತೋಷವನ್ನು ತರುವಲ್ಲಿ ಇದು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ". ಎಂದರು.
ಈ ಸಂದರ್ಭದಲ್ಲಿ ಎ.ಜೆ. ಗ್ರೂಪ್ನ ನಿರ್ದೇಶಕರಾದ ಡಾ.ಅಮಿತಾ ಮಾರ್ಲ, ಶ್ರೀ ಪ್ರಶಾಂತ್ ಶೆಟ್ಟಿ, ಡಾ.ಪ್ರಮೋದ ಲಕ್ಷ್ಮಣ್ - ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್, ಓಯಸಿಸ್ ಫರ್ಟಿಲಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಜಾಧವ್ ಉಪಸ್ಥಿತರಿದ್ದರು.
ಓಯಸಿಸ್ ಫರ್ಟಿಲಿಟಿ ಬಗ್ಗೆ:
ಓಯಸಿಸ್ ಫರ್ಟಿಲಿಟಿ ಸಂಸ್ಥೆ ,ಸದ್ಗುರು ಹೆಲ್ತ್ಕೇರ್ ಸರ್ವಿಸಸ್ ಪ್ರೈ.ಲಿಮಿಟೆಡ್ ಸಂಸ್ಥೆಯ ಅಂಗ ಸಂಸ್ಥೆಯಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದೆ. ಭಾರತದಲ್ಲಿ ಸಂತಾನೋತ್ಪತ್ತಿ ಮತ್ತು ಫಲವತ್ತತೆಯ ಚಿಕಿತ್ಸೆಯಲ್ಲಿ ಪೋಷಕರಿಗೆ ಒಂದೇ ಸೂರಿನಡಿ ಚಿಕತ್ಸೆ ನೀಡುವ ನಿಟ್ಟಿನಲ್ಲಿ ಡೇ-ಕೇರ್ ಕ್ಲಿನಿಕ್ ನಲ್ಲಿ ತೆರೆದಿದೆ. ಇಲ್ಲಿ ಏಕ ಕಾಲದಲ್ಲಿ ಪ್ರಮುಖವಾಗಿ ವೈದ್ಯಕೀಯ ಸಮಾಲೋಚನೆ, ಪರೀಕ್ಷೆ, ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ.
2009 ರಲ್ಲಿ ಪ್ರಾರಂಭವಾದ ಓಯಸಿಸ್ ಫರ್ಟಿಲಿಟಿ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದ ಅನುಭವವನ್ನು ಹೊಂದಿರುವ ಬಂಜೆತನ ನಿವಾರಣಾ ತಜ್ಞರ ತಂಡದಿಂದ ನಡೆಸಲ್ಪಡುತ್ತಿದೆ.ಜೊತೆಗೆ ಉನ್ನತ ಗುಣಮಟ್ಟದ ಸೇವೆ ಮತ್ತು ಹೆಚ್ಚಿನ ಯಶಸ್ಸಿನಿಂದ ಅತ್ಯುತ್ತಮ ಖ್ಯಾತಿಯನ್ನು ಗಳಿಸಿದೆ.
ಇಂದು ಈ ಸಂಸ್ಥೆ ದೇಶದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳಲ್ಲಿ 25 ಶಾಖೆ ಗಳನ್ನು ಹೊಂದಿದೆ.