ಕಾರ್ಕಳ, ಸೆ 09 (DaijiworldNews/MS): ಕೇಂದ್ರ ಸರಕಾರದ ಅಂತರ್ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಅಧ್ಯಯನ ತಂಡ ಪ್ರಾಕೃತಿಕ ವಿಕೋಪ ಸಂಭವಿಸಿದ ಮಾಳ ಪ್ರದೇಶಕ್ಕೆ ಸೆ.೯ರಂದು ಭೇಟಿ ನೀಡಿತು. ಕೇಂದ್ರ ಅಧ್ಯಯನ ತಂಡದ ಜತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ಕು
ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಮಾಳ, ನೂರಾಳ್ಬೆಟ್ಟು ಭಾಗದಲ್ಲಿ ಇತ್ತೀಚೆಗೆ ಪ್ರಾಕೃತಿ ವಿಕೋಪ ಸಂಭವಿಸಿತ್ತು. ಚೌಕಿ, ನೂರಾಳ್ ಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟಿತ್ತು. ಈ ಸ್ಥಳಕ್ಕೆ ಅಧಿಕಾರಿಗಳ ತಂಡ ಮೊದಲಿಗೆ ಭೇಟಿ ನೀಡಿತು.
ಬಳಿಕ ತಾಲೂಕಿನ ಸಮಗ್ರ ವರದಿಯನ್ನು ಸಚಿವರು, ಅಧಿಕಾರಿಗಳು ಅಧ್ಯಯನ ತಂಡಕ್ಕೆ ನೀಡಿದರು. ಸ್ಥಳಿಯರಿಂದ ಮಳೆ ಹಾಗೂ ಹಾನಿಗೆ ಸಂಭವಿಸಿದ ಕುರಿತು ತಂಡ ಮಾಹಿತಿ ಪಡೆದುಕೊಂಡಿತು. ತಾಲೂಕಿನಲ್ಲಿ ಹೊಸ ಸೇತುವೆಗಳ ನಿರ್ಮಾಣ, ಹಾನಿಯ ವಸ್ತುಸ್ತಿತಿ, ಇತ್ಯಾದಿಗಳ ಬಗ್ಗೆ ಸಮಗ್ರ ವಿವರಣೆಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಸಚಿವರು ನೀಡಿದರು.
ತಾಲೂಕಿನ ಅಂಡಾರು, ಪರಪ್ಪಾಡಿ, ನೂರಾಳ್ಬೆಟ್ಟು ಈ ಮೂರು ಕಡೆ ಹೊಸ ಸೇತುವೆ ಸೇರಿದಂತೆ ತಾಲೂಕಿಗೆ ಮಳೆಹಾನಿಗೆ ಸಂಭವಿಸಿದ ವಸ್ತುಸ್ಥಿತಿಗಳ ಬಗ್ಗೆ ವಿವರಿಸಿ, ಪರಿಹಾರಕ್ಕೆ ಸಚಿವರು ಮನವಿ ಮಾಡಿದರು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ಕುಮಾರ್, ರಾಜ್ಯ ವಿಪತ್ತು ನಿರ್ವಹಣ ಪ್ರಾಽಕಾರದ ಆಯುಕ್ತ ಮನೋಜ್ ರಾಜಾನ್, ಹಣಕಾಸು ಇಲಾಖೆ ಉಪನಿರ್ದೇಶಕ ಮಹೇಶ್ಕುಮಾರ್, ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕುಂದಾಪುರ ಎ.ಸಿ ಕೆ.ರಾಜು, ಕಾರ್ಕಳ ತಹಶಿಲ್ದಾರ್ ಪ್ರದೀಪಕುಮಾರ್ ಕುರ್ಡೆಕರ್, ಡಿವೈಎಸ್ಪಿ ವಿಜಯಪ್ರಸಾದ್, ಗ್ರಾಮಾಂತರ ಠಾಣೆ ಎಸ್ಐ ತೇಜಸ್ವಿ, ಗ್ರಾ.ಪಂ ಸದಸ್ಯರು, ಮುಖಂಡರು, ಸ್ಥಳಿಯರು ಉಪಸ್ಥಿತರಿದ್ದರು.