ಮಂಗಳೂರು, ಸೆ 08 (DaijiworldNews/DB): ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೇಂಬಳ ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್ ಪಡೆದಿದ್ದಾರೆ. ಕಾಲೇಜಿನ ಒಟ್ಟು1168 ವಿದ್ಯಾರ್ಥಿಗಳಲ್ಲಿ 1094ರಷ್ಟು (ಶೇ. 93.66ರಷ್ಟು) ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
720ರಲ್ಲಿ 705 ಅಂಕ ಪಡೆದ ಆದಿತ್ಯ ಕಾಮತ್ ಅಮ್ಮೇಂಬಳ ಸಾಮಾನ್ಯ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್ ಪಡೆದಿದ್ದಾರೆ. 695 ಅಂಕ ಪಡೆದ ಸ್ಕಂದ ಶಾನ್ಭಾಗ್ 175ನೇ ರ್ಯಾಂಕ್, 685 ಅಂಕ ಪಡೆದ ಪ್ರಿಯಾ ಅಶೋಕ್ ಪಾಟೀಲ್ 478ನೇ ರ್ಯಾಂಕ್, 680 ಅಂಕ ಪಡೆದ ಕಾರ್ತಿಕ್ ರಾಮ್ ಬಿ.ಎನ್. 878ನೇ ರ್ಯಾಂಕ್, 677 ಅಂಕ ಪಡೆದ ವಿವೇಕ್ರಾಜ್ ಎಂ. ದಂಡು 977 ರ್ಯಾಂಕ್ ಪಡೆದುಕೊಂಡಿದ್ದಾರೆ. ಕ್ಯಾಟಗರಿ ವಿಭಾಗದಲ್ಲಿ ಶ್ರೇಯಸ್ ಕೆ. ನಿಶಾನಿ ಅವರು 45ನೇ ರ್ಯಾಂಕ್, ವಿಶಾಲ್ ಎಸ್. 267ನೇ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ ಮೆರಿಟ್ನಲ್ಲಿ ಅಖಿಲ ಭಾರತ ಮಟ್ಟದ ಮೊದಲ ಒಂದು ಸಾವಿರ ರ್ಯಾಂಕ್ಗಳಲ್ಲಿ 5 ರ್ಯಾಂಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ. ಎಂಟು ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ ಪಡೆದರೆ, 20 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 43 ವಿದ್ಯಾರ್ಥಿಗಳು 625ಕ್ಕಿಂತ ಅಧಿಕ, 73 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 146 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 225 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 93ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಇದು ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಸಮರ್ಥ್ ಎಸ್. ಬೆಟಗೇರಿ ಜನರಲ್ ಮೆರಿಟ್ನಲ್ಲಿ 1196ನೇ ರ್ಯಾಂಕ್ ( 675 ಅಂಕ), ಅಮರೇ ಗೌಡ 1281ನೇ ರ್ಯಾಂಕ್ (675 ಅಂಕ), ಅರ್ಹನ್ ವಿಲಾಸ್ ಕೆ. 1270ನೇ ರ್ಯಾಂಕ್ ( 675 ಅಂಕ), ಸಾತ್ವಿಕ್ ಎ.ಎಸ್. 1443ನೇ ರ್ಯಾಂಕ್ (671 ಅಂಕ), ಮದನ್ ಕುಮಾರ್ ಎಸ್.ವಿ. 1522ನೇ ರ್ಯಾಂಕ್ (670 ಅಂಕ), ಪವನ್ ಎಸ್. ಧುಲಶೆಟ್ಟಿ 1698ನೇ ರ್ಯಾಂಕ್ (670 ಅಂಕ), ಯಶಸ್ವಿನಿ ಎಸ್. ಬಾಳಪ್ಪನವರ್ 1836ನೇ ರ್ಯಾಂಕ್ ( 667 ಅಂಕ), ತುಬಾಚಿ ಕೃತಿಕ್ ಚನ್ನಗೌಡ (665 ಅಂಕ), ದೀಪಾ ರಾಜಶೇಖರ್ ಕುಲ್ಲೂರ್ (665 ಅಂಕ), ಅನುಜ್ಞಾ ಕೆ. (665 ಅಂಕ), ಪ್ರಣವ್ ಎಸ್ (660 ಅಂಕ), ಕೆ. ನಿಭಾ ಭಟ್ ( 660 ಅಂಕ), ದೇವ್ದೀಪ್ ಬಿ. ಹಲಗೆರಿ (656 ಅಂಕ), ವೃಷಭ್ ವಿ. ಜವಳಿ (655 ಅಂಕ), ಅಜಯ್ ಎಸ್. ಹೆಗ್ಡೆ (655 ಅಂಕ), ಮನಸ್ವಿ ಶಿವನಗೌಡ ಪಾಟೀಲ್ (648 ಅಂಕ), ದಿಶಾ ಎನ್. (648 ಅಂಕ), ವೀಣಾ ಎಂ.ಡಿ (648 ಅಂಕ), ಹಿಮಾಂಶು ಎಲ್. (645 ಅಂಕ), ಈಶಾನ್ಯ ಬಿ.ಯು. (645 ಅಂಕ), ದೀಪ್ತಿ ಕಲ್ಲೂರ್ (642 ಅಂಕ), ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ (642 ಅಂಕ), ಸುಜನ್ ವಿ.ಎಸ್. (640 ಅಂಕ), ಅಭಿಷೇಕ್ ಬಿ.ವೈ. (640 ಅಂಕ), ಯತೀಂದ್ರ ಪಿ.ಎಂ. (637 ಅಂಕ), ಪಾರ್ಥ ಶಿಂಧೆ (637 ಅಂಕ), ರಕ್ಷನ್ ರೈ (637 ಅಂಕ), ನಮಿತಾ ಎನ್. (636 ಅಂಕ), ದಿಶಾಂತ್ ಕೆ. (636 ಅಂಕ), ಅರುಣ್ ದೇವ್ ಕೆ.ಎಚ್. (635 ಅಂಕ), ಪ್ರಜ್ವಲ್ ಎಸ್. ಗೌಡ (633 ಅಂಕ), ಸೌಜನ್ಯ ಪಟ್ಟೆದ್ (633 ಅಂಕ), ಸೂರ್ಯದೀಪ್ ಎಸ್. (633 ಅಂಕ), ಶ್ರೀಸಂಪತ್ ಎಸ್.ಡಿ. (631 ಅಂಕ), ಶ್ರೇಯಸ್ ಭಟ್ (630 ಅಂಕ), ಭವಿನ್ ಸುನಿಲ್ ಶೆಟ್ಟಿ (630 ಅಂಕ), ಮೋಕ್ಷಾ ಧಾಯಿನಿ ಎಂ.ಎ. (629 ಅಂಕ) ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.