ಬಂಟ್ವಾಳ, ಸೆ 07 (DaijiworldNews/MS): ಎಸ್. ಡಿ.ಪಿ.ಐ.ಮುಖಂಡ ರಿಯಾಜ್ ಪರಂಗಿಪೇಟೆ ಅವರ ಬಿಸಿರೋಡಿನ ಕೈಕಂಬ ಸಮೀಪದ ಪರ್ಲಿಯಾದಲ್ಲಿರುವ ಮನೆಗೆ ಕೇಂದ್ರದ ಎನ್.ಐ.ಎ.ಪೋಲಿಸರ ತಂಡ ಇಂದು ಮುಂಜಾನೆ ವೇಳೆ ದಾಳಿ ನಡೆಸಿದೆ.
ಇತ್ತೀಚಿಗೆ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ಎರಡು ದಿನಗಳ ಹಿಂದೆ ಏಕಕಾಲದಲ್ಲಿ ಸುಮಾರು 33 ಕಡೆಗೆ ದ.ಕ.ಜಿಲ್ಲೆಯ ಎಸ್.ಡಿ.ಪಿ.ಐ. ಹಾಗೂ ಇತರ ಸಂಘಟನೆ ಯ ಪ್ರಮುಖರ ಮನೆಗಳಿಗೆ ದಾಳಿ ನಡೆಸಿ ದಾಖಲೆ ಪತ್ರಗಳ ನ್ನು ವಶಕ್ಕೆ ಪಡೆದುಕೊಂಡಿತ್ತು.
ಇಂದು ಮುಂಜಾನೆ ವೇಳೆ ಎಸ್.ಡಿ.ಪಿ.ಐ ಮುಖಂಡ ತಾಂಟ್ ರೆ ಬಾ ತಾಂಟ್ ಪ್ರಸಿದ್ಧಿಯ ರಿಯಾಜ್ ಫರಂಗಿಪೇಟೆ ಅವರ ಮನೆಗೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದೆ.
ಆದರೆ ಇದೇ ವೇಳೆ ಸ್ಥಳೀಯ ಎಸ್ ಡಿ ಪಿ.ಐ ಮುಖಂಡ ರಿಂದ ಗೋ ಬ್ಯಾಕ್ ಗೋ ಬ್ಯಾಕ್ ಎಂಬ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸುಮಾರು ಐವತ್ತಕ್ಕೂ ಅಧಿಕ ಎಸ್.ಡಿ.ಪಿ.ಐ.ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಭದ್ರತೆಯ ದೃಷ್ಟಿಯಿಂದ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ಅವಿನಾಶ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿದ ಬಳಿಕ ಕಾರ್ಯಕರ್ತರು ಪ್ರತಿಭಟನೆ ನಿಲ್ಲಿಸಿ ಗುಂಪು ಸೇರಿದ್ದಾರೆ. ಎಸ್.ಡಿ.ಪಿ.ಮುಖಂಡ ರಿಯಾಜ್ ಪರಿಂಗಿಪೇಟೆ ಅವರನ್ನು ಯಾವ ಪ್ರಕರಣದ ವಿಚಾರದ ಕುರಿತು ತನಿಖೆ ಕೈಗೊಂಡಿದ್ದಾರೆ ಎಂಬುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.