ಮಂಗಳೂರು, ಸೆ 07 (DaijiworldNews/SM): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಿ.ಎಫ್.ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಎನ್ಐಎ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಮಂಗಳೂರಿನ ಪಿಎಫ್ಐ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎ.ಕೆ ಅಶ್ರಫ್, ಪ್ರವೀಣ್ ನೆಟ್ಟಾರ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ಎನ್ಐಎ ದುರ್ಬಳಕೆ ಮಾಡುತ್ತಿದೆ. ಪಿಎಫ್ ಐ ನಾಯಕರು ಎನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಕೇಸ್ ಎನ್ಐಎಗೆ ವಹಿಸಲಾಗಿದೆ. ಆದರೆ ಇದರಲ್ಲಿ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಕೇಸ್ ನಲ್ಲಿ ಸಂಘಪರಿವಾರ ಇದೆ. ಆದರೆ ಇದನ್ನ ಯಾಕೆ ಸರಕಾರ ಎನ್ಐಎಗೆ ವಹಿಸಿಲ್ಲ. ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ? ಎಂದು ಎ.ಕೆ ಅಶ್ರಫ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡ ಇದೆ. ಆದರೆ ಮುಸ್ಲಿಂ ಯುವಕರು ಆರೋಪಿಗಳಾಗಿರುವ ಕೇಸ್ ಗಳನ್ನ ಮಾತ್ರ ಎನ್ಐಎಗೆ ವಹಿಸಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ಎನ್ಐಎ ಎಂಬ ತನಿಖಾ ಸಂಸ್ಥೆಯನ್ನ ದುರ್ಬಳಕೆ ಮಾಡಲಾಗುತ್ತಿದೆ. ನಿನ್ನೆ 30ಕ್ಕೂ ಅಧಿಕ ಕಡೆ ಎನ್ಐಎ ದಾಳಿ ನಡೆಸಿದೆ. ಬಿಜೆಪಿ ವಿರುದ್ದ ಅವರ ಕಾರ್ಯಕರ್ತರ ಅಸಮಾಧಾನ ಸರಿ ಪಡಿಸಲು ಎನ್ಐಎಗೆ ವಹಿಸಲಾಗಿದೆ.