ಮಂಗಳೂರು, ಸೆ 07 (DaijiworldNews/DB): ಜೇನು ಕೃಷಿಯಲ್ಲಿ ತೊಡಗಿಸಿಕೊಂಡ ಮನಮೋಹನ್ ಆರಂಬ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಧು ಕ್ರಾಂತಿ ಕಲ್ಪನೆಯಂತೆ ಮೋದಿ ತವರು ರಾಜ್ಯ ಗುಜರಾತ್ಗೆ ದಕ್ಷಿಣ ಕನ್ನಡ ಜಿಲ್ಲೆಯ ತುಡುವೆ ಜೇನನ್ನು ಒದಗಿಸಿಕೊಟ್ಟಿದ್ದಾರೆ. ಆ ಮೂಲಕ ತುಡುವೆ ಜೇನು ಸಿಹಿ ರಾಷ್ಟ್ರಕ್ಕೂ ಪಸರಿಸಲು ಕಾರಣರಾಗಿದ್ದಾರೆ.
ಕರ್ನಾಟಕ ರಾಜ್ಯದ ಜೇನು ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮನಮೋಹನ್ ಆರಂಬ್ಯ ಅವರು ರಾಜ್ಯಾದ್ಯಂತ ಜೇನು ಮತ್ತು ಕುಟುಂಬಗಳನ್ನ ಒದಗಿಸಿಕೊಟ್ಟು ಜೇನು ಕೃಷಿಕರಿಗೆ ಪ್ರೇರಣೆಯಾಗಿ ಮನೆ ಮಾತಗಿದ್ದಾರೆ. ಇದೀಗ ದ.ಕ. ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದ್ದ ತುಡುವೆ ಜೇನನ್ನು ಗುಜರಾತ್ಗೂ ಸಾಗಣೆ ಮಾಡಿ ಅಲ್ಲಿಗೂ ಪರಿಚಯಿಸಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಇದನ್ನು ಅವರು ಪರಿಚಯಿಸಿದ್ದು, ಗುಜರಾತ್ಗೂ ಪರಿಚಯಿಸುವ ಮೂಲಕ ರಾಷ್ಟ್ರಕ್ಕೂ ಪಸರಿಸಲು ಅವರು ಮುಂದಾಗಿದ್ದಾರೆ.
ಗುಜರಾತ್ಗೆ ತುಡುವೆ ಜೇನು ಸಿಹಿಯನ್ನು ಪರಿಚಯಿಸುವ ಮೂಲಕ ಅವರ ಸಾಧನೆಗೆ ಇನ್ನೊಂದು ಗರಿ ಸಿಕ್ಕಂತಾಗಿದೆ.