ಸುಳ್ಯ, ಸೆ 07 (DaijiworldNews/DB): ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆ ಯಜಮಾನ ಸಜೀವದಹನವಾದ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಐವರ್ನಾಡಿನ ಪರ್ಲಿಕಜೆ ಸುಧಾಕರ (47) ಸಾವನ್ನಪ್ಪಿದವರು. ಸುಧಾಕರ ಅವರು ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಒಂದು ಪಾರ್ಶ್ವ ಸುಟ್ಟು ಹೋಗಿತ್ತು. ಅಸೌಖ್ಯದಿಂದಿದ್ದ ಸುಧಾಕರ ಅವರಿಗೆ ತತ್ಕ್ಷಣಕ್ಕೆ ಹೊರಗೋಡಲು ಸಾಧ್ಯವಾಗದೆ ಬೆಂಕಿಯಲ್ಲಿ ದಹಿಸಲ್ಪಟ್ಟು ಸಜೀವದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವೇಳೆ ಸುಧಾಕರ ಅವರ ಪತ್ನಿ ಟ್ಯಾಪಿಂಗ್ಗೆ ತೆರಳಿದ್ದು, ಪುತ್ರಿ ಶಾಲೆಗೆ ಹೋಗಿದ್ದಳು. ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ತಗುಲಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿದ್ದಾರೆ.