ಕಾಸರಗೋಡು, ಸೆ 07 (DaijiworldNews/HR): ಹಿರಿಯ ಪತ್ರಕರ್ತ, ಕಾಸರಗೋಡು ಪ್ರೆಸ್ ಕ್ಲಬ್ ಮಾಜಿ ಕಾರ್ಯದರ್ಶಿ ಉಣ್ಣಿ ಕೃಷ್ಣನ್ ಪುಷ್ಪಗಿರಿ (64) ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನ ಗಳಿಂದ ಹೃದಯ ಸಂಬಂಧಿ ಕಾಯಿಲೆ ಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೀನಿಯರ್ ಜರ್ನಲಿಸ್ಟ್ ಫೋರಂನ ಕಾಸರಗೋಡು ಜಿಲ್ಲಾ ಕೋಶಾಧಿಕಾರಿಯಾಗಿದ್ದು, ಪಿ ಟಿ ಐ ಕಾಸರಗೋಡು ಜಿಲ್ಲಾ ವರದಿಗಾರ, ಉತ್ತರದೇಶಂ ಮಲಯಾಳ ದೈನಿಕದ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಹಲವು ನಾಟಕ ಗಳನ್ನು ಬರೆದಿದ್ದಾರೆ.
ಉಣ್ಣಿ ಕೃಷ್ಣನ್ ಅವರಿಗೆ ಹಲವು ಮಾಧ್ಯಮ ಪ್ರಶಸ್ತಿಗಳು ಲಭಿಸಿವೆ. ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲೂ ಸಕ್ರಿಯರಾಗಿದ್ದರು.
ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.