ಉಡುಪಿ, ಸೆ 06 (DaijiworldNews/MS): 2014 ರಲ್ಲಿ ನಡೆದ ರೌಡಿ ಪಿಟ್ಟಿ ನಾಗೇಶ್ ಕುಕ್ಕಿಕಟ್ಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಆರೋಪಿತರಾಗಿದ್ದ ಮುನ್ನ ಯಾನೆ ರಿಚಾರ್ಡ್ ಮಸ್ಕರೇನಸ್ ಗರಡಿಮಜಲು, ಗುರು ಪ್ರಸಾದ್ ಶೆಟ್ಟಿ ಅಲೆವೂರು, ವಿಶ್ವ ಯಾನೆ ವಿಶ್ವನಾಥ ಕೊರಂಗ್ರಪಾಡಿ, ಸಂತೋಷ್ ಬೈಲೂರು, ಝಾಕೀರ್ ಹುಸೇನ್ ಕುಕ್ಕಿಕಟ್ಟೆ ಖುಲಾಸೆಗೊಂಡವರು.
ಪೂರಕ ಸಾಕ್ಷಿಗಳ ಅಧಾರಗಳ ಕೊರತೆಯಿಂದ ಅರೋಪಿಗಳ ಅರೋಪ ಸಾಬೀತು ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣದಲ್ಲಿದ್ದ ಅರೋಪಿಗಳನ್ನು ಖುಲಾಸೆಗೊಳಿಸಿದೆ.
ಪಿಟ್ಟಿ ನಾಗೇಶ್ ರೌಡಿ ಶೀಟ್ ಆಗಿದ್ದು, ಸೆಪ್ಟೆಂಬರ್ 11, 2014 ರಂದು ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದ ಮುಂದೆ ಕೊಲೆಯಾಗಿದ್ದ. ನ್ಯಾಯಾಲಯದಲ್ಲಿ ಸುಮಾರು 71 ಸಾಕ್ಷಿಗಳನ್ನು ಹಾಜರುಪಡಿಸಲಾಗಿದ್ದು 18 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಎಲ್ಲಾ ಐವರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು.
ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪು ನೀಡಿದ್ದು, ಅರೋಪಿಗಳ ಪರ ಹಿರಿಯ ವಕೀಲ ಶಾಂತರಾಮ್ ಶೆಟ್ಟಿ ವಾದಿಸಿದ್ದರು.