ಮಂಗಳೂರು, ಫೆ 6 (MSP): ಚಿಲಿಂಬಿಯ ಅಂಗಡಿ ಮಾಲೀಕನೋರ್ವ, ಗ್ರಾಮ ಕರಣಿಕ, ಉರ್ವ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಮತ್ತಿಬ್ಬರು ಸ್ಥಳೀಯರ ವಿರುದ್ದ ಅತಿಕ್ರಮವಾಗಿ ಅಂಗಡಿ ಪ್ರವೇಶ , ವಸ್ತು ಹಾನಿ ಹಾಗೂ ಗೂಂಡಾಗಿರಿ ನಡೆಸಿದ ವಿರುದ್ದ , ಉರ್ವ ಪೋಲಿಸ್ ಠಾಣೆ ಮತ್ತು ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಫೆ.೫ ರಂದು ತಹಶೀಲ್ದಾರರ ಕಛೇರಿಯಲ್ಲಿ ಗ್ರಾಮ ಕರಣಿಕರಾಗಿರುವ ಧರ್ಮ ಸಾಮ್ರಾಟ್ ಹಾಗೂ ಉರ್ವ ಪೋಲಿಸ್ ಠಾಣೆಯ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿ ಪುರುಷೋತ್ತಮ ಅಂಬು ಚೆಟ್ಟಿಯಾರ್ ಹಾಗೂ ದಿನೇಶ್ ರೈ ಎಂಬವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ, ಗೂಂಡಾಗಿರಿಯ ಎಸಗಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಳುಗೆಡವಿ ಹೊರಗೆಸೆದಿರುತ್ತಾರೆ. ತಹಶೀಲ್ದಾರರು ಮಂಗಳ ಮತ್ತು ಉರ್ವ ಪೋಲಿಸ್ ಠಾಣೆಯ ಅಧಿಕಾರಿಯವರು ನನಗೆ ಯಾವುದೇ ನೋಟಿಸ್ ನೀಡದೆ ಅಂಗಡಿಗೆ ಹಾನಿಗೊಳಿಸಿದ್ದು ಮಾತ್ರವಲ್ಲದೆ ಬಾಗಿಲು ಕಿಟಕಿ ಗೋಡೆಯನ್ನು ದ್ವಂಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಅಂಗಡಿ ಬಗ್ಗೆ ಮಾಲೀಕರರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಡುವಿನ ವ್ಯಾಜ್ಯವು ನ್ಯಾಯಲಯಲ್ಲಿದೆ ಎಂದು ತಿಳಿದು ಬಂದಿದೆ.