ಮಂಗಳೂರು, ಸೆ 05 (DaijiworldNews/SM): ಪ್ರಗತಿಪರ ಚಿಂತಕಿ, ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾದಂತಹಾ ಗೌರಿ ಲಂಕೇಶರನ್ನು ಸಂಘಪರಿವಾರದ ಕಿರಾತಕರು ಗುಂಡಿಕ್ಕಿ ಹತ್ಯೆಗೈದ ದಿನವಾದ ಸೆಪ್ಟೆಂಬರ್ 5ನ್ನು ನೆನಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಘಟಕದ ವತಿಯಿಂದ ವಿವಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯು ಜರುಗಿತು.
ದೇಶದಲ್ಲಿ ಪ್ರಭುತ್ವದ ವಿರುದ್ಧ, ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುವ ಮುಖಾಂತರ, ಹತ್ಯೆಗೈಯುವ ಮುಖಾಂತರ ಆರ್ಎಸ್ಎಸ್ ಭಯೋತ್ಪಾದನೆಯನ್ನು ತೋರ್ಪಡಿಸುತ್ತಿದೆ. ಇವರ ಭಯೋತ್ಪಾದನೆಗೆ ದಾಬೋಲ್ಕಾರ್, ಪನ್ಸಾರೆ, ಕಲಬುರುಗಿ ಹಾಗೂ ಗೌರಿ ಲಂಕೇಶ್ ರಂತಹಾ ಹೋರಾಟಗಾರರು, ಚಿಂತಕರು ಹತ್ಯೆಗೀಡಾಗಿದ್ದು, ಆದರೆ ಅವರ ಜೀವ ಮಾತ್ರ ಕಣ್ಮರೆ ಯಾಗಿದೆಯೇ ಹೊರತು ಅವರು ಸಿದ್ದಾಂತಗಳು ಇಂದೂ ಅಚ್ಚಲಿಯದೇ ನಮ್ಮಲ್ಲಿ ಉಳಿದಿದೆ. ಹತ್ಯೆ, ಜೈಲುಗಳನ್ನು ತೋರಿಸಿ ಈ ಫ್ಯಾಶಿಷ್ಟ್ ವಿರೋಧಿ ಹೋರಾಟವನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ರವರು ಹೇಳಿದರು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ರಿಯಾಝ್, ಮಂಗಳೂರು ವಿವಿ ಮುಖಂಡರಾದ ಮುಖ್ತಾರ್, ಮುನೀರ್, ಆಶಿಕ್ ಉಪಸ್ಥಿತರಿದ್ದರು.