ಉಡುಪಿ, ಸೆ 04 (DaijiworldNews/SM): ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಹೇರೂರು ಕಾಡೋಳಿಯಲ್ಲಿ ಹಸಿ ಕಸ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೆ ಆ ಊರಿನ ಸಮಸ್ತ ಗ್ರಾಮಸ್ಥರಿಂದ ಒಕ್ಕೊರಲ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಆದಿತ್ಯವಾರ ಹೇರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಟನಾ ಪೂರ್ವಸಭೆ ನಡೆಯಿತು. ಕೆಲವೇ ದಿಂದ ಹಿಂದೆ ಚಾಂತಾರು ಪಂಚಾಯತ್ ನ ವ್ಯಾಪ್ತಿಯಲ್ಲಿ ಬರುವ 2.25 ಎಕರೆ ಜಗದಲ್ಲಿ ಎಸ ಎಲ್ ಅರ ಎಂ ಘಟಕ ತೆರೆಯಲು ಪ್ರಸ್ತಾವನೆಯಾಗಿತ್ತು . ಜಾಗ ಸರ್ವೇ ಮಾಡಲು ಬಂದಿದ್ದ ಸರ್ವೇಯರ್ ಗ್ರಾಮಸ್ಥರು ಸೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಕೃಷಿ ವಿಜ್ಞಾನಕ್ಕೆ ಸೇರಿದ ೧೧ ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲು ಮುಂದಾಗಿದೆ. ಈಗಾಗಲೇ ಕೃಷಿ ವಿಜ್ಞಾನ ಕೇಂದ್ರ ಕೂಡ ಪ್ರಾಜೆಕ್ಟ್ ಗೆ ಒಪ್ಪಿ ಜಾಗ ನೀಡಲು ಮುಂದಾಗಿದ್ದು, ಕೆಲವು ಸದಸ್ಯರ ತೆರೆಮರೆಯಲ್ಲಿ ನಡೆಯುತ್ತಿರುವ ಕೆಲಸವನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ.
ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಚಾಂತಾರು, ವಾರಂಬಳ್ಳಿ, ಹಾರಾಡಿ ಮತ್ತು ಹಂದಾಡಿ ಗ್ರಾಮ ಪಂಚಾಯ್ತ್ ಒಳಗೊಳ್ಳುತ್ತವೆ . ಕೆಲವು ಗ್ರಾಮ ಪಂಚಾಯತ್ ಸದಸ್ಯರ ಪಿತೂರಿಯಿಂದ ಈ ಘಟಕ ನಿರ್ಮಿಸಲು ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಸ್ಥಳಿಯಯರು ಆರೋಪಿಸಿದರು
ಈ ಸಂದರ್ಭದಲ್ಲಿ ಸ್ಥಳೀಯರಾದ ಜ್ಞಾನ ವಸಂತ ಶೆಟ್ಟಿಯವರು ಮಾತನಾಡಿದರು ಜನಪ್ರತಿನಿಧಿಗಳು ಜನರ ವಿರೋಧ ಹೋಗಬಾರದು. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆದರೆ, ಬಹಳಷ್ಟು ಮಾಲಿನಿ ಉಂಟಾಗುತ್ತದೆ. ಕೇವಲ ಒಂದೆರಡು ಗ್ರಾಮದ ಕಸ ವಿಲೇವಾರಿ ಅಲ್ಲ . ಇಡೀ ತಾಲೂಕಿನ ತ್ಯಾಜ್ಯದ ವಿಲೇವಾರಿ ದೃಷ್ಟಿಯಿಂದ ಈ ಘಟಕ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದಾರೆ. ಇದನ್ನ ಯಾವ ಕಾರಣಕ್ಕೂ ಸಹಿಸಲ್ಲ. ಒಂದು ವೇಳೆ ಸಾರ್ವಜನಿಕರ ಗಮನಕ್ಕೆ ಬಂದು ಪ್ರಕ್ರಿಯೆ ನಡೆದರೆ, ಕಾನೂನು ಸಮರಕ್ಕೂ ಸಿದ್ದ ಇದ್ದೇವೆ. ಈ ಘಟಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ ಚಾಂತಾರು ಗ್ರಾಮ ಪಂಚಾಯತ್ , ಜಾಗ ನೀಡಲು ಒಪ್ಪಿ ಕೊಂಡ ಬ್ರಹ್ಮಾವರ ಕೃಷಿ ಕೇಂದ್ರ ಎರಡು ಸ್ಥಳಕ್ಕೂ ಮುತ್ತಿಗೆ ಹಾಕುತ್ತೇವೆ., ಎಂದು ಅವರು ಎಚ್ಚರಿಸಿದರು .
ಈ ಹೋರಾಟಕ್ಕೆ ಸಮಸ್ತ ಗ್ರಾಮಸ್ಥರು ಪಕ್ಷ ಜಾತಿ ಬೇಧವಿಲ್ಲದೆ ಒಟ್ಟಾಗಿ ಹೋರಾಟಕ್ಕೆ ಕೈಜೋಡಿಸಬೇಕು. ಆಗ ಘಟಕ ಸ್ಥಾಪನೆಯ ಪ್ರಯತ್ನ ಕ್ಕೆ ಸಾಧ್ಯವಾಗುತ್ತದೆ ಎಂದರು.