ಬಂಟ್ವಾಳ, ಸೆ 04 (DaijiworldNews/SM): ಮಳೆ ಬಂದರೆ ಕೆಸರು, ಬಿಸಿಲು ಇದ್ದರೆ ದೂಳು, ಇದು ಪ್ರಯಾಣಿಕರ ನಿತ್ಯದ ಗೋಳು. ಇದು ಬಿಸಿರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತದಿಂದ ಆಗಿರುವ ಸಮಸ್ಯೆಯಾಗಿದೆ.
ಕಾಮಗಾರಿ ಆರಂಭವಾದಂದಿನಿಂದ ಜನರಿಗೆ ಒಂದಲ್ಲ ಒಂದು ಸಮಸ್ಯೆ ತಪ್ಪಿಲ್ಲ. ಟ್ರಾಫಿಕ್ ಸಮಸ್ಯೆ ನಿತ್ಯದ ಪರಿಪಾಠ ವಾದರೆ ಮಳೆಗಾಲದಲ್ಲಿ ರಸ್ತೆ ಮಾಯವಾಗಿ ಕೆಸರು ಗದ್ದೆಯಾದರೆ ಬಿಸಿಲಿಗೆ ದೂಳು ಸಮಸ್ಯೆ. ಕೆ.ಎನ್.ಆರ್.ಸಿ.ಯ ಬೇಜಾಬ್ದಾರಿ ವರ್ತನೆ ಪರಿಣಾಮವಾಗಿ ಪ್ರಯಾಣಿಕರಿಗೆ ನಿತ್ಯ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ.
ಕಾಮಗಾರಿ ಆರಂಭ ಮಾಡಿದ ಬಳಿಕ ಜನರಿಗೆ ಸಂಚಾರಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ ಬದಲಿ ರಸ್ತೆ ನಿರ್ಮಾಣ ಪೂರ್ಣಪ್ರಮಾಣದ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡದೆ ಇರುವುದೇ ಇದಕ್ಕೆ ಮೂಲಕಾರಣವಾಗಿದೆ ಎಂದು ಆರೋಪ ಗಳು ಕೇಳಿಬಂದಿವೆ.