ಮಂಗಳೂರು, ಸೆ 04 (DaijiworldNews/HR): ಮಂಗಳೂರಿನ ಕೆಲರೈನಲ್ಲಿರುವ, ಹದಿನಾಲ್ಕು ಎಕರೆಯ ಹಸಿರು ವರ್ಣಿತ ಪ್ರದೇಶದಲ್ಲಿ ಅವ್ರತವಾಗಿರುವ ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸತತ ಎರಡನೇ ವರುಷದ ಉಚಿತ ಆರೋಗ್ಯ ಶಿಬಿರವನ್ನು ಸುಮಾರು 1500 ಜನರ ಉಪಸ್ತಿತಿಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರಿನ ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿಯವರು ಆಗಮಿಸಿದ್ದು, ಇವರೊಂದಿಗೆ ಮಂಗಳೂರಿನ ಕಾರ್ಪೋರೇಟರ್ ಭಾಸ್ಕರ ಮೊಯ್ಲಿ, ನೀರುಮಾರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಧನವಂತೆ. ವಿ, ಉಪಾಧ್ಯಕ್ಷೆ ಶ್ರೀಮತಿ ಯಶೋಧ ಜಿ, ಪಂಚಾಯಿತಿ ಸದಸ್ಯರಾದ ಮೈಕಲ್ ಅಂತೋನಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೇಯರ್ ರವರು ದ್ವೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೆಸಿಡೆನ್ಸಿ ಶಾಲೆ (ಸಿ.ಬಿ.ಎಸ್.ಇ) ಮತ್ತು ಪದವಿ ಪೂರ್ವ ವಸತಿ ಕಾಲೇಜು, ಸುಮಾರು 45 ವರುಷಗಳಿಂದ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತ ಬರುತ್ತಿದೆ. ಶಾಲೆಯು Pre KG - Grade XII ತನಕ ಸಿಬಿಎಸ್ಇ ಪಟ್ಯಕ್ರಮವನ್ನು ಹೊಂದಿರುತ್ತದೆ ಮತ್ತು ಪಿಯು ಮಕ್ಕಳಿಗೆ ಜೆಇಇ, ನೀಟ್ ತರಗತಿಗಳನ್ನು ನಡೆಸುತ್ತಿದೆ.
ಮೇಯರವರು ಶಾಲೆ ಮತ್ತು ಕಾಲೇಜಿನ ಸಮಾಜಮುಖಿ ಕಾರ್ಯಕ್ರಮಗಳನ್ನು ತುಂಬಾ ಹೊಗಳಿದರು ಮತ್ತು ಇದೇ ರೀತಿ ಇನ್ನು ಮುಂದೆಯೂ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು ಈ ಆರೋಗ್ಯ ಶಿಬಿರದ ಸವಲತ್ತುಗಳನ್ನು ಸದುಪಯೋಗ ಪಡಿಸಲು ನಾಗರಿಕರಿಗೆ ಕರೆ ಕೊಟ್ಟರು.