ಮಂಗಳೂರು, ಸೆ 03 (DaijiworldNews/HR): ಗಣೇಶ ಚತುರ್ಥಿಯ ಪ್ರಯುಕ್ತ ಸಾಮರಸ್ಯ ಮಂಗಳೂರು ನೇತೃತ್ವದಲ್ಲಿ ಹಾಗೂ ತುಳು ಸಾಹಿತ್ಯ ಅಕಾಡಮಿ ಸಹಕಾರದೊಂದಿಗೆ ಮಂಗಳೂರಿನ ತುಳು ಭವನದಲ್ಲಿ ವಿಶಿಷ್ಟ ಶೈಲಿಯ ಕಾರ್ಯಕ್ರಮ ಆಯೋಜಿಸಲಾಯಿತು.
ಸರ್ವ ಧರ್ಮಗಳ ಬಂಧುಗಳನ್ನು ಆಹ್ವಾನಿಸಿ ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿ, ಬಗೆ ಬಗೆ ತಿನಿಸುಗಳ ಸಾಮರಸ್ಯದ ಸಹ ಭೋಜನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದೈಜಿವಲ್ಡ್ ಮೀಡಿಯಾದ ಸ್ಥಾಪಕರಾದ ವಾಲ್ಟರ್ ನಂದಳಿಕೆ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಸಂಕಲ್ಪದ ಅಡಿಯಲ್ಲಿ ವಿಘ್ನ ವಿನಾಶಕನ ಈ ಪವಿತ್ರವಾದ ಹಬ್ಬದಲ್ಲಿ ಸಾಮರಸ್ಯದಿಂದ ಬೆರೆತು ಆಚರಿಸುತ್ತಿರುವುದು, ಸಮಾಜದ ಉತ್ತಮ ಸುಭೀಕ್ಷೆಯ ಮುನ್ನುಡಿಯಾಗಿದೆ ಎಂದರು.
ಸಾಮರಸ್ಯ ತಂಡದ ಅಧ್ಯಕ್ಷರು ಶ್ರೀಮತಿ ಮಂಜುಳಾ ನಾಯಕ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರು ಅರ್ಜುನ್ ಭಂಡಾರ್ಕರ್ ಹಾಗೂ ವಾಲ್ಟರ್ ನಂದಳಿಕೆ, ಯಕ್ಷಗಾನ ಅರ್ಧ ದಾರಿ ಕಲಾವಿದರು ಶ್ರೀಯುತ ಜಬ್ಬಾರ್ ಸಮೊ ಇವರೆಲ್ಲರಿಗೂ ಸಾಮರಸ್ಯದ ತಂಡದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕೋಡಿಯಾಲ್ ಖಬರ್ ಪತ್ರಿಕೆಯ ಪ್ರಧಾನ ಸಂಪಾದಕರಾದ ವೆಂಕಟೇಶ್ ಬಾಳಿಗಾ, ಟೈಲರ್ಸ್ ಅಸೋಸಿಯೇಷನ್ ಉರ್ವಾ ವಲಯದ ಅಧ್ಯಕ್ಷರಾದ ಉದಯ್ ಬಂಗೇರಾ, ಶ್ರೀ ಶಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಘಟನಾಕಾರರಾದ ಶಬಾನ ಬಾನು, ಸರಿತಾ, ಸುಜಾತ, ಉರ್ವಾ ವಲಯ ಕುರುಬರ ಸಂಘದ ಅಧ್ಯಕ್ಷರಾದ ಚಂದ್ರು, ಕುರಿಯಪ್ಪ, ರಾಜಹುಲಿ ಮಲ್ಲಿಕಾಜುರ್ನ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಹರೀಶ್ ಕುಮಾರ್ ,ಸಾಮಾಜಿಕ ಕಾರ್ಯಕರ್ತ ಎಂ. ಜಿ.ಹೆಗ್ಡೆ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶ್ರೀ ಕ್ಷೇತ್ರ ಕುದ್ರೋಳಿ ಇದರ ಕೋಶಾಧಿಕಾರಿಗಳಾದ ಪದ್ಮರಾಜ್, ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರು ಶಿರಡಿ ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರರು ವಿಶ್ವಾಸ್ ಕುಮಾರ್ ದಾಸ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ಸಂತೋಷ್ ಕಾಮತ್, ಮಾಜಿ ಮೇಯರ್ ಅಶ್ರಫ್, ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮ.ನ.ಪಾ ಸದಸ್ಯರುಗಳಾದ ಝೀನತ್ ಶಂಶುದ್ದೀನ್, ನವೀನ್ ಡಿ ಸೋಜಾ, ಸಬಿತಾ ಮಿಸ್ಕಿತ್, ಕೇಶವ ಮರೋಳಿ, ನಿತ್ಯಾನಂದ ಶೆಟ್ಟಿ, ಶೆರಿಲ್ ಲೋನಾ, ಪ್ರವೀಣ್ ಚಂದ್ರ ಆಳ್ವ, ಎ.ಸಿ ವಿನಯರಾಜ್, ಮಲ್ಲಿಕಾ ಪಕ್ಕಳ, ಕಲಾ. ಡಿ .ರಾವ್, ಗೀತಾ ಪ್ರವೀಣ್, ಉದಯ ಆಚಾರ್, ರಘುರಾಜ್ ಕದ್ರಿ, ಲಾರೆನ್ಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪ್ರಮೀಳಾ ಅವರು ನಿರೂಪಿಸಿ ಚೇತನ್ ಕುಮಾರ್ ಅವರು ಧನ್ಯವಾದವನ್ನು ಸಮರ್ಪಿಸಿದರು.