ಬೆಳ್ತಂಗಡಿ, ಸೆ 03 (DaijiworldNews/HR): ಹಾಲಿನ ಡೈರಿಗೆ ಹೋದ ವೃದ್ಧೆ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಗೊಂದಲ ಉಂಟಾಗಿ ಕೊನೆಗೂ ಪ್ರಕರಣ ಸುಖಾಂತ್ಯ ಕಂಡಿದೆ.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು ಮನೆಯ ಯಮುನಾ ಅಚಾರ್ಯ (62) ಅವರು ಇಂದು ಬೆಳಗ್ಗೆ 6:45 ಕ್ಕೆ ಮೇಲಂತಬೆಟ್ಟು ಹಾಲಿಗೆ ಡೈರಿಗೆ ಹೋಗಿದ್ದರು. ಬಳಿಕ ಮನೆಗೂ ವಾಪಸ್ ಬರದೆ ನಾಪತ್ತೆಯಾಗಿದ್ದರು. ಬಳಿಕ ರಸ್ತೆಯಲ್ಲಿ ರಕ್ತದ ಕಲೆ, ಎರಡು ಚಪ್ಪಲಿ, ಚೆಲ್ಲಿರುವ ಹಾಲು ಸ್ಥಳದಲ್ಲಿ ಇತ್ತು. ಆದ್ರೆ ಹಾಲಿನ ಕ್ಯಾನ್ ಮತ್ತು ವೃದ್ಧೆ ನಾಪತ್ತೆಯಾಗಿದ್ದು, ಊರವರು ಹಾಗೂ ಬೆಳ್ತಂಗಡಿ ಪೊಲೀಸರು ಆಸ್ಪತ್ರೆ ,ಸಿಸಿ ಕ್ಯಾಮೆರಾಗಳಲ್ಲಿ ಹುಡುಕಾಟ ನಡೆಸಿದ್ದರು.
ಇದೀಗ ಮನೆಯವರಿಗೆ ದನ ಕಟ್ಟಲು ಹೋದಾಗ ಹಿಂಭಾಗದಲ್ಲಿ ಬಾವಿಯ ಕಟ್ಟೆಯಲ್ಲಿ ಕುಳಿತ್ತಿದ್ದರು. ವೃದ್ಧೆಯನ್ನು ವಿಚಾರಿಸಿದಾಗ ನಾನು ಜಾರಿಬಿದ್ದು ಗಾಯವಾಗಿದ್ದು ಬೇರೆ ಏನೂ ಆಗಿಲ್ಲ ಎಂದಿದ್ದಾರೆ.
ಇನ್ನು ಮನೆಯ ಹಿಂಭಾಗದ ಗುಡ್ಡದಲ್ಲಿ ಹಾಲಿನ ಕ್ಯಾನ್, ಚೀಲದಲ್ಲಿ ಎರಡು ಮದ್ಯದ ಬಟಲ್, ಕತ್ತಿ ಪತ್ತೆಯಾಗಿದೆ. ಅಜ್ಜಿಯನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದು, ವೃದ್ಧೆ ಸೃಷ್ಠಿಸಿದ ಅವಂತಾರದಿಂದ ಊರವರು ಹಾಗೂ ಪೊಲೀಸರಿಗೆ ತಲೆನೋವು ತಂದಿತ್ತು.