ಮಂಜೇಶ್ವರ,ಸೆ 03 (DaijiworldNews/MS): ತುಳುನಾಡಿನಲ್ಲಿ ಸಿಪಿಐ (ಎಂ) ಪಕ್ಷವನ್ನು ಕಟ್ಟಿ ಬೆಳೆಸಲು ನೇತೃತ್ವ ವಹಿಸಿದ ಹಿರಿಯ ಸಾಮಾಜಿಕ ನೇತಾರ ಎ ಅಬೂಬಕ್ಕರ್ (87) ಸ್ವಗೃಹದಲ್ಲಿ ನಿಧನರಾದರು. ಅಭಿವತ್ತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು. ಪೈವಳಿಕೆ ಹುತಾತ್ಮರ ಒಡನಾಡಿಯಾಗಿದ್ದರೂ . ಇ.ಎಂ.ಎಸ್ , ಏಕೆಜಿ, ಪಾಚೇನಿ ಕುಂಞರಾಮನ್, ಇಂಬಚ್ಚಿ ಬಾವ, ಎಂ ವಿ ರಾಘವನ್, ಎಂ ರಾಮಣ್ಣ ರೈ, ಎಂ ವಿ ಗೋವಿಂದನ್ ಮಾಸ್ಟರ್, ಪಿ ಕರುಣಾಕರನ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಏಕೆಜಿ ಮತ್ತು ರಾಮಣ್ಣ ರೈ , ಟಿ ಗೋವಿಂದನ್, ಡಾ. ಎ ಸುಬ್ಬರಾವ್ , ಸಿ ಏಚ್ ಕುಂಞಂಬು ರವರ ಚುನಾವಣೆಯಲ್ಲಿ ತುಳುನಾಡಿನ ನೇತೃತ್ವ ವಹಿಸಿದ್ದರು.
ಸಿಪಿಐಎಂ ಪಕ್ಷದ ಲೋಕಲ್ ಕಾರ್ಯದರ್ಶಿ, ಕುಂಬಳೆ ,ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ, ಜಿಲ್ಲಾ ಸಮಿತಿ ಸದಸ್ಯರಾಗಿ ದೀರ್ಘಕಾಲ ದುಡಿದರು. ರೈತ ಸಂಘದ ಕಣ್ಣೂರ್ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು. ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ, ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯ, ವಿವಿಧ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ರಾಜ್ಯ ಮಟ್ಟದ ಆಗ್ರೋ ಮಿಷನರೀಸ್ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.
ಪೈವಳಿಕೆ ನಗರ ಶಾಲೆಯನ್ನು ಹೈಸ್ಕೂಲ್ ಹಾಗೂ ಹೈಯರ್ ಸೆಕೆಂಡರಿ ಆಗಿ ಭಡ್ತಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪೈವಳಿಕೆ ನಗರ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ, ಪೈಯಕ್ಕಿ ಉಸ್ತಾದ್ ಅಕಾಡೆಮಿಯ ಸ್ಥಾಪಕ ಉಪಾಧ್ಯಕ್ಷರಗಿದ್ದರು.
ಜನಸಾಮಾನ್ಯರ , ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ ಅವರು ಅಂಬಕ್ಕ ಎಂಬ ಹೆಸರಿನಿಂದಲೇ ಜನ ಪ್ರಿಯರಾಗಿದ್ದರು. ಕೇವಲ ಪ್ರಾಥಮಿಕ ವಿದ್ಯಾಬ್ಯಾಸ ಮಾತ್ರ ಹೊಂದಿದ್ದರು. ಮಲಯಾಳಂ, ತುಳು, ಕನ್ನಡ, ಭಾಷೆಗಳಲ್ಲಿ ನಿರರ್ಗಳನಾಗಿ ರಸವತ್ತಾವಾಗಿ ಭಾಷಣಗಳು ಮಾಡುವವರಾಗಿದ್ದರು. ತುಳು ಭಾಷೆಯ ಭಾಷಣಗಳು ಜನಾಕರ್ಷಣೆ ಹೊಂದಿತ್ತು. ನಾಡಿನ ಹಲವು ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಗಳು ಗೌರವಿಸಿ ಸನ್ಮಾನಿಸ ಲಾಗಿತ್ತು. ಸಿಪಿಐ (ಎಂ)ಕಾಸರಗೋಡು ಜಿಲ್ಲಾ ಸಮಿತಿಯು ಮಂಜೇಶ್ವರ ಏರಿಯಾ ಸಮಿತಿಯು ಸಂತಾಪ ವ್ಯಕ್ತಪಡಿಸಿದೆ