ಮಂಗಳೂರು, ಸೆ 02 (DaijiworldNews/MS): ದೇಶದಿಂದ ಅಕ್ರಮವಾಗಿ ವಿದೇಶಿ ಕರೆನ್ಸಿಯನ್ನು ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/MS-010922-curency.jpg>
ಯುಎಇ ಕರೆನ್ಸಿಯನ್ನು ದೇಶದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಕಾಸರಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು ತಪಾಸಣೆ ವೇಳೆ 5,77,500 ರೂ. ಮೌಲ್ಯದ 27,500 ಯುನೈಟೆಡ್ ಅರಬ್ ಎಮಿರೇಟ್ಸ್ ಕರೆನ್ಸಿ ಪತ್ತೆಯಾಗಿದೆ.