ಕಾರ್ಕಳ, ಸೆ 01 (DaijiworldNews/MS): ಮಾಳ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಪಂಚಾಯಿತಿ ಸದಸ್ಯರು ಮಂಡಿಸಿದ್ದಾರೆ.
ಮಾಳ ಗ್ರಾ.ಪಂ.ನಲ್ಲಿ 15 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದ್ದು, 2ನೇ ಬಾರಿ ಸದಸ್ಯೆಯಾಗಿರುವ ಮಲ್ಲಿಕಾ ಶೆಟ್ಟಿಯವರು 2021ರ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 15 ಸದಸ್ಯರ ಪೈಕಿ ಎಲ್ಲಾ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು, ಅಧ್ಯಕ್ಷೆಯಾಗಿರುವ ಮಲ್ಲಿಕಾ ಶೆಟ್ಟಿ ಪರ 4 ಮಂದಿ, ವಿರುದ್ಧ 10 ಮಂದಿ ಮತ ಚಲಾಯಿಸಿದ್ದರು. ಓರ್ವ ಸದಸ್ಯೆ ಅನಾರೋಗ್ಯದಿಂದ ಗೈರು ಹಾಜರಾಗಿದ್ದರು.
ಈ ಮೂಲಕ ಮಲ್ಲಿಕಾ ಶೆಟ್ಟಿಯವರು ಅವಿಶ್ವಾಸ ಗೊತ್ತುವಳಿಯ ಮೂಲಕ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಮಲ್ಲಿಕಾ ಶೆಟ್ಟಿ ಪರ ಸಂಜೀವ , ಶಾಂತಿ ಶೆಟ್ಟಿ, ಸುಂದರಿ ಗೌಡ, ಮಲ್ಲಿಕಾ ಶೆಟ್ಟಿ ಮತ ಚಲಾಯಿಸಿದರೆ, ಅವರ ವಿರುದ್ಧ ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಬರ್ವೆ, ಉಮೇಶ್ ಪೂಜಾರಿ, ಸುಧೀರ್ ಶೆಟ್ಟಿ, ನಿತೀಶ್ ತೆಂಡುಲ್ಕರ್, ಅಶೋಕ್ ಶೆಟ್ಟಿ, ಶಶಿಕಲಾ ಪೂಜಾರಿ, ನೀಲು ಮೇರ್ತಿ, ಯೋಗೀಶ್ ಪೂಜಾರಿ, ವಿಮಲ, ರಕ್ಷಿತ ಮತ ಚಲಾಯಿಸಿದ್ದಾರೆ.