ಉಡುಪಿ, ಫೆ 04(SM): ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಧಿಕಾರಿಗಳ ವರ್ಗಾವಣೆಯ ಪರ್ವ ಆರಂಭಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯದ 8 ಮಂದಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಅದರಂತೆ ದಕ್ಷ ಮಹಿಳಾ ಅಧಿಕಾರಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ನೀಡಿದೆ.
ಹೆಬ್ಸಿಬಾ ರಾಣಿ ಪ್ರೀಯಾಂಕ ಮೇರಿ ಫ್ರಾನ್ಸಿಸ್
ಉಡುಪಿಯಿಂದ ವರ್ಗಾವಣೆಗೊಂಡ ಪ್ರಿಯಾಂಕ ಮೇರಿಯವರನ್ನು ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರನ್ನಾಗಿ ನೇಮಕಗೊಳಿಸಲಾಗಿದೆ. ಪ್ರಿಯಾಂಕ ಮೇರಿ 2009ರ ಐಎ ಎಸ್ ಬ್ಯಾಚ್ ನಲ್ಲಿ ಉತ್ತೀರ್ಣರಾಗಿದ್ದರು.
ಇನ್ನು ತೆರವಾಗುವ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ಥಾನಕ್ಕೆ ಹುಬ್ಬಳ್ಳಿ ಧಾರವಾಡದ ಸ್ಪೆಷಲ್ ಪರ್ಪಸ್ ವೆಹಿಕಲ್ ಇದರ ಆಡಳಿತ ನಿರ್ದೇಶಕರಾಗಿದ್ದ ಹೆಬ್ಸಿಬಾ ರಾಣಿ ಕೋರ್ಲಪಾಟಿ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ. ಹೆಬ್ಸಿಬಾ ಅವರು 2011ರ ಐಎ ಎಸ್ ಬ್ಯಾಚ್ ನವರಾಗಿದ್ದರು.