ಮಂಗಳೂರು, ಆ 31 (DijiworldNews/HR): ಉಳ್ಳಾಲ ಸಮೀಪದ ಬಂಡಿಕೋಟ್ಯ ನಿವಾಸಿ ಸುಧೀರ್ ಕುಮಾರ್ (32) ಅವರ ಪಾರ್ಥಿವ ಶರೀರ ಕೊಳೆತ ಸ್ಥಿತಿಯಲ್ಲಿ ಮುಂಬೈನ ಚರಂಡಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತರು ಧರಿಸಿದ್ದ ಶರ್ಟ್ನ ಜೇಬಿನಲ್ಲಿ ಪತ್ತೆಯಾದ ಲೇಬಲ್ನಿಂದ ಶವವನ್ನು ಪೊಲೀಸರು ಗುರುತಿಸಿದ್ದಾರೆ.
ಆಗಸ್ಟ್ 14 ರಿಂದ ಸುಧೀರ್ ಕುಮಾರ್ ನಾಪತ್ತೆಯಾಗಿದ್ದು, ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂತರ ವಸಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಚರಂಡಿಯಲ್ಲಿ ಶವ ಪತ್ತೆಯಾಗಿದೆ. ತನಗೆ ಜೀವ ಬೆದರಿಕೆ ಇದೆ ಎಂದು ಸ್ನೇಹಿತರಿಗೆ ತಿಳಿಸಿದ್ದ ಎನ್ನಲಾಗಿದೆ.
ಈತ ಉಳ್ಳಾಲ ಮೆಸ್ಕಾಂನಲ್ಲಿ ಡಿ ಗ್ರೂಪ್ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸಿ ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದ ಮಾಲತಿ ಅವರ ಪುತ್ರ. ಸುಧೀರ್ ಕುಮಾರ್ ಚಿಕ್ಕವಯಸ್ಸಿನಲ್ಲೇ ಮುಂಬೈಗೆ ತೆರಳಿದ್ದರಿಂದ ಸ್ಥಳೀಯವಾಗಿ ಅವರ ಬಗ್ಗೆ ಹೆಚ್ಚು ತಿಳಿದಿಲ್ಲ.