ಉಡುಪಿ, ಆ 31 (DijiworldNews/HR): ಕಡಿಯಾಳಿಯ ಮಹಿಮರ್ದಿನಿ ದೇವಳದ ಆವರಣದಲ್ಲಿ 56ನೇ ವರ್ಷ ಗಣೇಶೋತ್ಸವ ಆಚರಿಸುತ್ತಿದ್ದು, ಗಣೇಶ ಪೆಂಡಾಲ್ನಲ್ಲಿ ಸಾವರ್ಕರ್ ಫೋಟೋಗೆ ಷ್ಪಾರ್ಚನೆ ನಡೆಸುವ ಮೂಲಕ ಗೌರವ ಸಲ್ಲಿಸಲಾಗಿದೆ.
ಸಾವರ್ಕರ್ ಭಾವಚಿತ್ರದ ಜೊತೆಗೆ ಅವರ ಜೀವನದ ಬಗೆಗಿನ ಬರಹಗಳುಳ್ಳ ಪುಸ್ತಕಗಳ ಮಾರಾಟ ಮಡಲಾಗುತ್ತಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಸಾವರ್ಕರ್ ಪುಸ್ತಕ ಸ್ಮರಣಕೆ ನೀಡಲಾಗಿದೆ.
ಇನ್ನು ಐದು ದಿನಗಳ ಕಾಲ ಗಣೇಶ ಮೂರ್ತಿಯ ಜೊತೆಗೆ ಸಾವರ್ಕರ್ ಭಾವಚಿತ್ರ ಪ್ರದರ್ಶನವಾಗಲಿದ್ದು, ಸಾವರ್ಕರ್ ಬಗೆಗಿನ ಅಪಪ್ರಚಾರ ಗಳಿಗೆ ಉತ್ತರ ನೀಡಲು ಈ ವ್ಯವಸ್ಥೆ ಮಾಡಿದ್ದೇವೆ. ಸಾವರ್ಕರ್ ಒಬ್ಬ ಅಪ್ರತಿಮ ದೇಶಭಕ್ತ ಅನ್ನುವುದನ್ನು ಸಾಬೀತು ಮಾಡುವ ಕಾಲ ಬಂದಿದೆ. ಗಣೇಶೋತ್ಸವದ ಆಚರಣೆಯ ಉದ್ದೇಶವು ಹಿಂದುತ್ವದ ರಕ್ಷಣೆ. ಸಾವರ್ಕರ್ ಅವರ ಉದ್ದೇಶ ಕೂಡ ಹಿಂದುತ್ವದ ರಕ್ಷಣೆಯಾಗಿತ್ತು. ಗಣೇಶೋತ್ಸವ ಮತ್ತು ಸಾವರ್ಕರ್ ಅವರ ಜೀವನದ ಆಶಯ ಒಂದೇ. ಹಾಗಾಗಿ ಸಾವರ್ಕರ್ ಗಣೇಶೋತ್ಸವ ಮಾಡುತ್ತಿದ್ದೇವೆ ಎಂದು ಉಡುಪಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.