ಉಡುಪಿ, ಆ 29 (DaijiworldNews/HR): ಕಳೆದ ಏಳು ವರ್ಷಗಳಿಂದ ಉಡುಪಿ ಬುಡಕಟ್ಟು ಸಮುದಾಯದ ಕೊರಗ ಸಮುದಾಯವರಿಗೆ ಸರಕಾರ ಯಾವುದೇ ಅರೋಗ್ಯ ನಿಧಿ ಅನುದಾನ ಸಿಕ್ಕಿಲ್ಲ. ಜೇನು ಕುರುಬ ಮತ್ತು ಕೊರಗ ಸಮುದಾಯ ಈಗ ಅಳಿವಿನಂಚಿನಲ್ಲಿದೆ. ಆದರೆ ಇತ್ತೀಚಿಗೆ ಸರಕಾರ ವೈದ್ಯಕೀಯ ವೆಚ್ಚ ಮರುಪಾವತಿಯ ಅನುದಾನವನ್ನು ಇನ್ನು ಮುಂದೆ ಕೊಡಲು ಅವಕಾಶವಿಲ್ಲ ಎಂದು ಸರಕಾರ ಆದೇಶ ಕೊಟ್ಟಿದ್ದು, ಒಂದು ತಿಂಗಳೊಳಗಾಗಿ ಆ ಆದೇಶವನ್ನು ಹಿಂಪಡೆದು ಮತ್ತೆ ಆರೋಗ್ಯ ನಿಧಿ ವ್ಯವಸ್ಥೆಯನ್ನು ತರಬೇಕು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯೆಕ್ಷೆ ಸುಶೀಲ ನಾಡ ಆಗ್ರಹಿಸಿದರು.
ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಪ್ರತಿ ಜನಗಣತಿಯಿಂದ ಜನಗಣತಿಗೆ ಇಳಿಮುಖವಾಗುತ್ತದೆ, ಅಂದರೆ ನಮ್ಮ ಸಮುದಾಯ ಅಳಿವಿನ ಅಂಚಿನಲ್ಲಿ ಇದೆ. ಕಾರಣ ಇನ್ನೂ ನಿಗೂಢವಾಗಿದೆ ಜಿಲ್ಲಾಡಳಿತ ಮತ್ತು ಸರಕಾರದೊಂದಿಗೆ ಸಮುದಾಯ ನಸಿಸುತ್ತಿರುವ ಬಗ್ಗೆ ಅಧ್ಯನಗೊಳಿಸಬೇಕು ಮೊಹಮ್ಮದ ಪೀರ್ ವರದಿಯಂತೆ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮನೋಶಾಸ್ತ್ರಜ್ಞ ಒಳಗೊಂಡ ಸಮಿತಿ ರಚಿಸಿ ಅಧ್ಯಯನ ನಡೆಸಬೇಕೆಂಬುದು ನಮ್ಮ ಸಮುದಾಯ ಕಳೆದ 20 ವರ್ಷಗಳಿಂದ ಒತ್ತಾಯ ಮಾಡಿದ್ದರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ನಮ್ಮ ಸಮುದಾಯದ ಆರೋಗ್ಯ ಹದಗೆಟ್ಟುತ್ತಿರುವುದು ಮತ್ತು ಮರಣ ಹೊಂದುವುದು ಕೇವಲ ದುಶ್ಚಟ ಮತ್ತು ಮದ್ಯಪಾನದಿಂದ ಎಂಬ ಜಿಲ್ಲಾಡಳಿತ ವರದಿ ನೀಡಲಾಗಿದ್ದು ರಕ್ತಹೀನತೆ, ಅಪೌಷ್ಟಿಕತೆ, ಟಿ.ಬಿ, ಕ್ಯಾನ್ಸರ್ ಈ ರೀತಿಯ ಬೇರೆ ಬೇರೆ ಮಾರಕ ಖಾಯಿಲೆಗಳಿಂದ ಬಳಲಿಕೆಯಿಂದ ಮರಣ ಹೊಂದುತ್ತಿದ್ದಾರೆ ಎಂದರು.
ಇನ್ನು ಇದು ಸಮುದಾಯ ಸಂಘಟನೆಗಳು ಕಾಣುತ್ತಿರುವ ಸತ್ಯ ಜಿಲ್ಲಾಡಳಿತ ಪ್ರಸ್ತಾವನೆಯಲ್ಲಿ ವಿವರಿಸಿರುವ ವರದಿ ಅಪ್ರಸ್ತುತ. ಆದ್ದರಿಂದ ಕರ್ನಾಟಕ ರಾಜ್ಯಪಾಲರ ಆದೇಶ ಅನುಸಾರ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ರದ್ದು ಮಾಡಿದ ಆದೇಶವನ್ನು ಪುನರ ಪರಿಶೀಲಿಸಿ ನಡೆಸಿ ಸದ್ರಿ ಜಿಲ್ಲೆಗಳಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಸುವಂತೆ ಆದೇಶ ನೀಡಬೇಕು ಎಂದಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಅರೋಗ್ಯ ನಿಧಿಯಿಂದ ಒಟ್ಟು ರೂ 1,25,02,557 ಬಿಡುಗಡೆ ಮಾಡಿದ್ದು ಮುಂಡೇ ಈ ರೀತಿಯಾಗಿ ಹಣ ಮರುಪಾವತಿಗೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ. 2011 ರ ಜನಗಣತಿಯಂತೆ, 1400 ಮಂದಿ ಕಾಸರಗೋಡಿನಲ್ಲಿ, 11,133 ಉಡುಪಿಯಲ್ಲಿ, ಮತ್ತು 4858 ಮಂದಿ ಕೊರಗ ಸಮುದಾಯದವರು ದಕ್ಷಿಣ ಕನ್ನಡದಲ್ಲಿದ್ದಾರೆ.
ಸರಕಾರ ಹೊರಡಿಸಿದ ಆದೇಶವನ್ನು ಹಿಂಪಡೆಯದಿದ್ದರೆ ನಾವು ಬೀದಿಗಿಳಿದು ಧರಣಿ ಕುಳಿತುಕೊಳ್ಳಲು ಸಿದ್ದ ಎಂದು ಸುಶೀಲ ನಾಡ ಎಚ್ಚರಿಕೆ ನೀಡಿದ್ದಾರೆ
ಪುತ್ರನ್, ಕಾರ್ಯದರ್ಶಿ, ಬೊಗ್ರ ಕೊರಗ, ಸುನಂದ, ದಿವಾಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.