ಉಡುಪಿ,ಫೆ 4(MSP): ಉಡುಪಿಯಲ್ಲಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಅಭರಣ ಮಳಿಗೆಗೆ ಬಂದ ಮಹಿಳೆಯೋರ್ವಳು, ನಕಲಿ ಚಿನ್ನ ನೀಡಿ ಸುಮಾರು ೮೨ ಸಾವಿರ ರೂಪಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಜ.29 ರ ಮಂಗಳವಾರ ಸರಿತಾ ಪಾಂಡೆ ಎಂಬ ಹೆಸರು ಹೇಳಿಕೊಂಡು ಬಂದ ಮಹಿಳೆ 26.440 ಗ್ರಾಂ ಚಿನ್ನದ ಸರವನ್ನು ಕೊಟ್ಟು ಬದಲಿಗೆ ಒಂದು ಲಾಕೇಟ್, ಉಂಗುರ, ಕಿವಿಯೋಲೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದಾಗ ಮಳಿಗೆಯ ಮ್ಯಾನೇಜರ್ ಪರೀಕ್ಷೆ ಮಾಡಿದಾಗ ಚಿನ್ನದ ಸರವು 91.6 ಪರಿಶುದ್ದತೆಯನ್ನು ತೋರಿಸುತ್ತಿತ್ತು. ಅಲ್ಲದೆ ಸರದಲ್ಲಿ ಹಾಲ್ ಮಾರ್ಕ್ಸ್ ಸಹ ಇರುವುದನ್ನು ಮ್ಯಾನೇಜರ್ ಖಚಿತ ಪಡಿಸುತ್ತಾರೆ. ಬಳಿಕ ಮಹಿಳೆ 14.01 ಗ್ರಾಮ ಪೆಂಡೆಂಟ್ 4.0430 ಗ್ರಾಮ ಕಿವಿಯೋಲೆ ಹಾಗೂ 3.130 ಗ್ರಾಂ ಅನ್ ಕಟ್ ಡೈಮಂಡ್ ಉಂಗುರವನ್ನು ಖರೀದಿ ಮಾಡಿ ಚಿನ್ನದ ಸರದಲ್ಲಿ ಉಳಿದ 2,750 ರೂಪಾಯಿಯನ್ನು ಗ್ರಾಹಕರಾದ ಮಹಿಳೆಗೆ ಮಳಿಗೆಯವರು ನೀಡಿರುತ್ತಾರೆ.
ಆದರೆ ಅದೇ ದಿನ ರಾತ್ರಿ ಮತ್ತೆ ಮರು ಪರೀಕ್ಷೆಯನ್ನು ಮಾಡುವಾಗ ಆ ಸರದಲ್ಲಿ ತಾಮ್ರದ ಅಂಶವು ಒಳಗಡೆ ಇರುವುದು ಕಂಡು ಬಂದಿದ್ದು, ಈ ಮಹಿಳೆಯು ಸಂಸ್ಥೆಗೆ 82ಸಾವಿರ ರೂಪಾಯಿ ಮೊತ್ತದಹಾಲ್ ಮಾರ್ಕ ಚಿನ್ನವೆಂದು ನಂಬಿಸಿ ಮೋಸ ಮಾಡಿರುವುದಾಗಿ ಸಂಸ್ಥೆಯ ಮ್ಯಾನೇಜರ್ ಹಫೀಜ್ ರೆಹಮಾನ್ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ರೀತಿ ಮೈಸೂರಿನ ಮಲಬಾರ್ ಗೋಲ್ಡ್ ಶಾಖೆಗೂ ವಂಚಿಸಿಲು ಹೋಗಿ ಸಿಕ್ಕಿಬಿದ್ದಿದ್ದು ಈಕೆಯೆ ಉಡುಪಿ ಶಾಖೆಗೂ ವಂಚಿದವಳ ಎಂದು ತಿಳಿಯಲು ಉಡುಪಿ ಪೋಲಿಸರು ಮೈಸೂರಿಗೆ ತೆರಳಿದ್ದಾರೆ.