ಉಡುಪಿ, ಆ 27(DaijiworldNews/MS): ಈ ಬಾರಿಯ ಗಣೇಶ ಚತುರ್ಥಿಗೆ ಉಡುಪಿಯ ಜನರಿಗೆ ಬಾಟಲಿ ಒಳಗೆ ಅವಿತು ಕುಳಿತ ವಿಶಿಷ್ಟ ಗಣಪನ ದರ್ಶನ ಭಾಗ್ಯ ಪ್ರಾಪ್ತಿಯಾಗಲಿದೆ.
ಉಡುಪಿಯ ಮಾರುತಿ ವೀಥೀಕಾದಲ್ಲಿರುವ ಗಣೇಶೋತ್ಸವದ ಮಂಟಪದಲ್ಲಿ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಉಡುಪಿ ಖ್ಯಾತ ಕಲಾವಿದ ಮಹೇಶ್ ಮರ್ಣೆಯವರ ಅದ್ಭುತ ಕಲಾ ಕೃತಿಯಲ್ಲಿ ಒಂದಾದ ಬಾಟಲಿಯ ಒಳಗೆ ಆವೆಮಣ್ಣೆನಿಂದ ರಚಿಸಲಾದ ಗಣಪತಿಯ ಕಲಾಕೃತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.
ಸುಮಾರು10ವರ್ಷ ಹಿಂದೆ ರಚಿಸಲ್ಪಟ್ಟ ಈ ಗಣೇಶ ವಿಗ್ರಹವನ್ನು ಕಲಾ ಆಸಕ್ತರಿಗೆ ವೀಕ್ಷಿಸಲು ಮಾರುತಿ ವೀಥೀಕಾದ ಶ್ಯಾಮ್ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಗಣಪತಿಯ ಕಲಾ ಕೃತಿಯಲ್ಲಿಯೂ ಬಣ್ಣ ಸಹಿತ ರಚನೆ ಮಾಡಿರುವುದು ಅದ್ಭುತ ಕಲಾಕೃತಿಗಳಲ್ಲಿ ಒಂದಾಗಿದೆ., ಆಗಸ್ಟ್ 31ರ ಬುಧವಾರ ಚೌತಿಯ ದಿನದಂದು ಬೆಳಿಗ್ಗಿನಿಂದ ಸಂಜೆಯ ತನಕ ಮಾರುತಿ ವಿಥೀಕಾದಲ್ಲಿರುವ ಗಣಪತಿಯ ಪೆಂಡಾಲಿನಲ್ಲಿ ಕಲಾಸಕ್ತರಿಗೆ ಸಾರ್ವಜನಿಕರಿಗೆ ವೀಕ್ಷಿಸಲು ಉಚಿತ ಅವಕಾಶ ಇದೆ ಎಂದು ಮಾರುತಿ ವೀಥೀಕಾ ದಲ್ಲಿರುವ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.