ಮಂಗಳೂರು, ಆ 27(DaijiworldNews/MS): ಪಾಲಿಕೆ ವ್ಯಾಪ್ತಿಯ ಕ್ಲಾಕ್ ಟವರ್ನಿಂದ ಎ.ಬಿ. ಶೆಟ್ಟಿ ವೃತ್ತ, ಎ.ಬಿ ಶೆಟ್ಟಿ ವೃತ್ತದಿ೦ದ ಹ್ಯಾಮಿಲ್ಬನ್ ವೃತ್ತ, ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆಂಡ್ ರಾವ್ ವೃತ್ತ ಹಾಗೂ ರಾವ್ ಆಂಡ್ ರಾವ್ ವೃತ್ತದಿಂದ ಕ್ಲಾಕ್ಟವರ್ವರೆಗೆ ಏಕಮುಖ ರಸ್ತೆಯನ್ನು ಮಾರ್ಪಾಡು ಮಾಡಲಾಗಿದೆ.
ಈ ಏಕಮುಖ ರಸ್ತೆ ಹಾಗೂ ಅಭಿವೃದ್ದಿಪಡಿಸಿರುವ ಜಂಕ್ಷನ್ ಗಳ ಬಗ್ಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಮುಂದಾಗಿದೆ.
ಹೀಗಾಗಿ ಸಾರ್ವಜನಿಕರು , ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಜಾಲತಾಣ, ಫೇಸ್ಬುಕ್, ಟ್ವಿಟರ್, ಇನ್ಬಾಗ್ರಾಮ್ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಲಿಂಕ್ ಮುಖಾಂತರ ಪ್ರಸ್ತಾವನೆ ಕುರಿತು ಅಭಿಪ್ರಾಯ ಸಲ್ಲಿಸುವಂತೆ ಕೋರಿದೆ. ಸಾರ್ವಜನಿಕರು ತಮ್ಮ ಅನಿಸಿಕೆ
ಅಭಿಪ್ರಾಯಗಳನ್ನು ಸೆ.೯ ರೊಳಗೆ ಸಲ್ಲಿಕೆ ಮಾಡಬಹುದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.