ಮಂಗಳೂರು,ಫೆ 03 (MSP): ಈ ಬಾರಿಯ ಬಜೆಟ್ ಕೇವಲ ಟ್ರೈಲರ್, ಚಿತ್ರ ನೋಡಲು ಕಾಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಟ್ರೈಲರ್ನ ಮುಂದಿನ ಭಾಗ ಪ್ರಜಾಪ್ರಭುತ್ವ ನಾಶ. ಅದಕ್ಕೆ ಜನರು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ, ರಾಜ್ಯ ವಕ್ತಾರ ಪ್ರೊ| ರಾಧಾಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಈ ಬಜೆಟ್ ಹಳೇ ಗಾಡಿಗೆ ಹಳೆ ಬಣ್ಣವನ್ನೇ ಬಳಿದಂತಿದೆ. ಲೋಕಸಭೆ ಚುನಾವಣೆಗೆ ಕೇವಲ 2-3 ತಿಂಗಳು ಇರುವಾಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದು ಪ್ರಜಾಪ್ರಭುತ್ವ ವಿರೋಧಿ. ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹ ಅವರು ಕೂಡ ಈ ಬಗ್ಗೆ ಆಕ್ಷೇಪ ಎತ್ತಿದ್ದಾರೆ ಎಂದರು.
ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಮಾಡುವ ಮೂಲಕ ಲಕ್ಷಾಂತರ ಮಂದಿ ಎಸ್ಬಿಐ ಖಾತೆದಾರರ ಮಾಹಿತಿ ಸೋರಿಕೆಯಾಗಿದೆ. ಅಕ್ಕಪಕ್ಕದ ದೇಶಗಳೆಲ್ಲವೂ ಭಾರತವನ್ನು ದೂರವಿರಿಸುತ್ತಿವೆ. ಲಾಭದಲ್ಲಿರುವ ಬ್ಯಾಂಕ್ಗಳು ಪತನದ ಹಾದಿಯಲ್ಲಿವೆ. ಇದೇ ಮೋದಿ ಟ್ರೈಲರ್ ಎಂದು ವಿಶ್ಲೇಷಿಸಿದರು.
ಕೇಂದ್ರ ಸರಕಾರದ ರಫೇಲ್ ಡೀಲ್ ಅವ್ಯವಹಾರದ ಕುರಿತುಕೊನೆಯವರೆಗೂ ಮಾತನಾಡುತ್ತೇವೆ. 30 ಸಾವಿರ ಕೋ.ರೂ. ಲೂಟಿ ಹೊಡೆದ ಬಗ್ಗೆ ಹೇಳುತ್ತಲೇ ಇರುತ್ತೇವೆ ಎಂದರು.
ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ ನಿರಂಜನ್, ಜಿಲ್ಲಾ ಅಧ್ಯಕ್ಷ ಅಲೆಸ್ಟೇನ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ನಿರಂಜನ್ ರಾವ್, ನೀರಜ್ಪಾಲ್, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್, ಹಬೀಬ್ ಉಪಸ್ಥಿತರಿದ್ದರು.