ಉಡುಪಿ, ಫೆ 03 (MSP):ನನ್ನ ಜೀವನದಲ್ಲೆ ಮೊದಲೆಂಬಂತೆ ನನ್ನೂರಿಗೆ ಕಳಂಕ ತಂದ ಈ ಎರಡು ಕೊಲೆ ಘಟನೆ ಭಾರೀ ನೋವು ತಂದಿದೆ. ಈ ಬಗ್ಗೆ ಸರಕಾರದ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
ಆದರೆ ಪೋಲಿಸ್ ಇಲಾಖೆ ನ್ಯಾಯಯುತವಾಗಿ ತನಿಖೆ ಕೈಗೊಳ್ಳುತ್ತಿದೆ.ಇಲಾಖೆಯ ಅಧಿಕಾರಿಯವರ ಇಚ್ಚೆಯಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡಿಲ್ಲ ಬರುವ ೬ರೊಳಗೆ ಆರೋಪಿಗಳ ಪತ್ತೆ ಹಚ್ಚದಿದ್ದರೆ ನಮ್ಮೆಲ್ಲ ಜಿಲ್ಲೆಯ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಹಾಗೂ ಉನ್ನತ ಪೋಲೀಸ್ ಅಧಿಕಾರಿಯ ಗಮನಕ್ಕೆ ತರಲಾಗುವುದು ಇದಕ್ಕೆ ನಮ್ಮ ಜಿಲ್ಲೆಯ ಪೋಲಿಸ್ ಇಲಾಖೆ ಅವಕಾಶ ನೀಡುವುದಿಲ್ಲ ಎಂಬ ಆಶಾವಾದ ನಂಬಿಕೆ ನಮ್ಮಲ್ಲಿದೆ. ಆ ಉದ್ದೇಶದಿಂದ ಶಾಂತಿಯಿಂದಿರಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೆರೆದಿದ್ದ ಸಾವಿರಾರು ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರು.
ಕಳೆದ ಶನಿವಾರ ತಡರಾತ್ರಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅವರಿಗೆ ಗಲ್ಲು ಶಿಕ್ಷೆ ,ಗಡಿಪಾರಿಗೆ ಆಗ್ರಹಿಸಿ ರವಿವಾರ ಕೋಟ ಸಂತೆಮಾರುಕಟ್ಟೆಯ ಸರ್ವಿಸ್ ರಸ್ತೆಯ ಸಮೀಪ ಕೋಟ ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ಸ್ಥಳೀಯ ವಿವಿಧ ಸಂಘಟನೆ ಆಶ್ರಯಲ್ಲಿ ಹಮ್ಮಿಕೊಂಡ ಕೋಟ ಬಂದ್ ಹಾಗೂ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನಾ ಸಭೆಗೆ ಆಗಮಿಸಿ ಮನವಿ ಸ್ವೀಕರಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಭರತ್ ಹಾಗೂ ಯತೀಶ್ ಹತ್ಯೆಯನ್ನು ನ್ಯಾಯಯುತವಾಗಿ ನಮ್ಮ ಇಲಾಖೆ ರಾತ್ರಿ ಹಗಲೆನ್ನದೆ ತನಿಖೆ ನಡೆಸುತ್ತಿದೆ.ಅಂಥಹ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಕೇಸು ದಾಖಲಿಸುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಈಗಾಗಲೇ ೪ ತಂಡಗಳನ್ನು ರಚಿಸಿ ತನಿಖೆ ನಡೆಸಿಸುತ್ತಿದ್ದೆವೆ, ತನಿಖೆ ಪ್ರಗತಿ ಹಂತದಲ್ಲಿದೆ, ಯಾವುದೆ ರೀತಿಯ ಗೊಂದಲ ಬೇಡ, ಕೂಡಲೆ ಆರೋಪಿಗಳನ್ನು ಬಂಧಿಸಿ ಕಾನೂನು ಅಡಿಯಲ್ಲಿ ತಕ್ಕ ಶಿಕ್ಷೆ ಆಗುವಂತೆ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು. ನಿಮ್ಮ ಬೇಡಿಕೆಯಂತೆ ಕೋಟ ಆರಕ್ಷಕ ಠಾಣೆಗೆ ದಕ್ಷ ಪೋಲಿಸ್ ಅಧಿಕಾರಿಯನ್ನ ಅತೀ ಶೀಘ್ರವೇ ನೇಮಿಸುತ್ತೆವೆ.ಅಲ್ಲದೆ ಪೋಲೀಸ್ ಇಲಾಖೆಯ ಮೇಲೆ ಕೋಟ ಜನತೆ ನಂಬಿಕೆ ಇಟ್ಟು ಶಾಂತಿಯಿಂದಿರಿ ಎಂದು ಮನವಿ ಮಾಡಿದರು.
ಪ್ರತಿಭಟನೆಗೆ ಹರಿದು ಬಂತು ಜನಸಾಗರ
ಕಳೆದ ಮೂರನಾಲ್ಕು ದಿನಗಳಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಕೋಟ ಬಂದ್ ಪ್ರತಿಭಟನೆ ರವಿವಾರ ಜನಸಮೂಹ ಸಾಥ್ ನೀಡಿದ್ದು ಅಗಲಿದ ಇರ್ವರ ಆತ್ಮಕ್ಕೆ ಚಿರಶಾಂತಿ ದಕ್ಕಿತೆಂಬ ಭಾವನೆ ಮೂಡಿತು ಎಂಬಂತೆ ನೊಡು ನೋಡುತ್ತಿದ್ದಂತೆ ಕೋಟ ಸಂತೆಮಾರುಕಟ್ಟೆ ಸರ್ವಿಸ್ ರಸ್ತೆ ಭಾಗ ಜನರಿಂದ ತುಂಬಿ ತುಳುಕಿ ಅಗಲಿದ ಭರತ್ ಹಾಗೂ ಯತೀಶ್ ಕಳೆದು ಕೊಂಡು ದುಃಖ ಆವರಿಸಿದಂತಿತ್ತು.ಇನ್ನೊಂದೆಡೆ ಸೂರ್ಯನ ಬಿಸಿಲೆನ್ನದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಹತ್ತೆ ನಿಮಿಷದಲ್ಲಿ 48 ಸಾವಿರ!
ನೋಡು ನೋಡುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ ಗಾಣಿಗ ಹತ್ಯೆಯಾದ ಇರ್ವರ ಮನೆಯವರಿಗೆ ಸಹಾಯಕ್ಕೆಂದು ದೇಣಿಗೆ ಡಬ್ಬ ಹಿಡಿದು ಪ್ರತಿಭಟನಾ ನಿರತರಲ್ಲಿ ಹಣ ಸಂಗ್ರಹಿಸಿದರು ಇದು ಅಲ್ಪ ಮೊತ್ತದಾಗಿರಲ್ಲಿಲ್ಲ ಬದಲಾಗಿ ಹತ್ತೆ ನಿಮಿಷದಲ್ಲಿ ಸುಮಾರು ೪೮ಸಾವಿರ ಹಣ ಕ್ರೂಡಿಕರಿಸಿದ್ದು ಎಲ್ಲರ ಗಮನ ಕೇಂದ್ರಿಕರಿಸಿತು.
ದೇವರಲ್ಲಿ ಸಾಮೂಹಿಕ ಪ್ರಾರ್ಥನೆ
ಪ್ರತಿಭಟನಾ ಸಭೆಯಲ್ಲಿ ಮೊಳಗಿತು ಸಾಮೂಹಿಕ ಪ್ರಾಥನೆ ತನ್ನೂರ ಎರಡು ತನು ಜೀವ ಹತ್ಯೆಯನ್ನು ಖಂಡಿಸಿ ಕೋಟದ ಗ್ರಾಮದೇವತೆ ಅಮೃತೇಶ್ವರಿಯಲ್ಲಿ ಪ್ರಾರ್ಥನೆ ಹಾಗೂ ಸಂಕ್ರಾತಿ ದಿನದಂದು ಊಯಿಲು ನೀಡಲು ಸಭೆ ತಿರ್ಮಾನಿಸಿತು.
ಸಹೋದರರ ಕೋಟದ ಹೋರಾಟ
ಕೋಟ ಸಾಲಿಗ್ರಾಮ, ಸಾಸ್ತಾನ ಯಾವುದೇ ಭಾಗದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಇರ್ವವರು ಸಹೋದರರು ಒಟ್ಟುಗೊಳ್ಳುತ್ತಾರೆ ಅವರೇ ಜನಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಹಾಗೂ ಅವರ ಸಹೋದರ ಪ್ರಶಾಂತ್ ಶೆಟ್ಟಿ ಒಬ್ಬರು ಪ್ರತಿಭಟನಾ ಸಭೆಯನ್ನು ನಿರೂಪಿಸಿದಾದರೆ ಇನ್ನೊಬ್ಬರು ಪ್ರಾಸ್ತಾವನೆ ಸಲ್ಲಿಸಿ ಹೊರಾಟದ ಹಾದಿಗೆ ಕಿಚ್ಚು ಹಚ್ಚಿದರು.
ಹೋರಾಟಕ್ಕೆ ಮೊಗವೀರ ಯುವ ಸಂಘ ಸಾಥ್
ಇತ್ತೀಚಿಗೆ ಕೋಟ ಆಸುಪಾಸು ಮೊಗವೀರ ಸಮುದಾಯದ ಯುವಕರ ಸಾವು ಮರೆಯಲಾಗದಂತೆ ನೋವು ತಂದಿತ್ತಾದರೂ ಅದರ ಬಗ್ಗೆ ಸಮುದಾಯದ ಮುಖಂಡ ನಾಡೋಜ ಜಿ ಶಂಕರ್ ಮಾರ್ಗದರ್ಶನದಲ್ಲಿ ಹೋರಾಟಕ್ಕೆ ಅಣಿಯಾಗಿ ಇಡೀ ಸಮುದಾಯದ ಮುಖಂಡರುಗಳು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಪ್ರತಿಭಟಿಸಿದರು.
ಕೋಟ ಬಂದ್ ಯಶಸ್ವಿ
ಇಬ್ಬರ ಹತ್ಯೆಯನ್ನು ಖಂಡಿಸಿ ಕರೆನೀಡಿದ ಕೋಟ ಬಂದ್ ಭಾಗಶಃ ಯಶಸ್ವಿಯಾಯಿತು ಸ್ಥಳೀಯ ವ್ಯವಹಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು