ಮಂಗಳೂರು, ಆ 25 (DaijiworldNews/SM): 40 ಪರ್ಸೆಂಟ್ ಅಂತ ಹೇಳುವವರಿಗೆ ಸಾಕ್ಷಿಗಳೇನಿದೆ? ಆದರೆ, ಕಾಂಗ್ರೆಸ್ ಮೊಟ್ಟೆ, ಶಾಲಾ ಮಕ್ಕಳಿಗೆ ಕೊಡುವ ಊಟದಲ್ಲೇ ಹಣ ಮಾಡಿದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಸಾಕ್ಷಿ ಇದೆ. ಜಯಮಾಲಾ ಅವರು ಟಿವಿ ಮುಂದೆ ಹೇಳಿದ್ದಾರೆ. ಜಯಮಾಲಾ ಅವರೇ ಹೇಳಿದ್ದಾರೆ ಕಾಂಗ್ರೆಸ್ ಗೆ ಹಣ ಕೊಡಬೇಕಿತ್ತು. ಇನ್ನೊಂದು ಸರಕಾರವನ್ನು 40 ಪರ್ಸೆಂಟ್ ಸರಕಾರ ಎಂದು ಹೇಗೆ ಕರೆಯುತ್ತಾರೆ? ಕಾಂಗ್ರೆಸ್ ಪಕ್ಷ 80 ಪರ್ಸೆಂಟ್ ಕಮಿಷನ್ ಪಕ್ಷವಾಗಿದೆ. ಕಾಂಗ್ರೆಸ್ ನೆರೆ ಪರಿಹಾರಕ್ಕೆ ಮಾಡಿದ ಸಂಗ್ರಹದ ಹಣವನ್ನೇ ಲೂಟಿ ಮಾಡಿದೆ.
ಇದು ನಾವು ಹೇಳಿದ್ದಲ್ಲ, ಇದೆಲ್ಲಾ ಕಾಂಗ್ರೆಸ್ಸಿನ ಇತಿಹಾಸದಲ್ಲೇ ಇದೆ. ಅವರಿಗೆ ನೈತಿಕತೆ ಇಲ್ಲ, ಈ ಸರಕಾರ 40 ಪರ್ಸೆಂಟ್ ಆದರೆ ಸಾಕ್ಷಿ ನೀಡಲಿ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.