ಕಾಸರಗೋಡು, ಅ 24 (DaijiworldNews/MS): ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕಲ್ಲುಗಳನ್ನಿ ಇರಿಸಿ ವಿಧ್ವಂಸಕ ಕೃತ್ಯ ನಡೆಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎ೦ಬ ಬಗ್ಗೆ ಮಾಹಿತಿಗಳು ಲಭ್ಯವಾದ ಹಿನ್ನಲೆಯಲ್ಲಿ ರೈಲೈ ಭದ್ರತಾ ಪಡೆ, ರೈಲ್ವೇ ಪೊಲೀಸ್ ಇಲಾಖೆಯೂ ಪೊಲೀಸ್ ಇಲಾಖೆ ನೆರವಿನೊ೦ದಿಗೆ ಸಮಗ್ರ ತನಿಖೆಗೆ ಮುಂದಾಗಿದೆ.
ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ , ಉಪ್ಪಳ ಸನಿಹದ ಮುಟ್ಟಂ ಗೇಟ್, ಕೋಟಿಕುಳ೦, ಕಣ್ಣಾಪುರ೦, ಕಣ್ಣೂರ್ ಸೌತ್ವಳಪಟ್ಟಣಂ ಹಾಗೂ ಪಾಪಿನಶ್ಯೇರಿಯಲ್ಲಿ ರೈಲ್ವೆ ಹಳಿಯಲ್ಲಿ ಬೃಹತ್ತು ಕಲ್ಲುಗಳಿರಿಸಿ ಹಳಿ ತಪ್ಪಿಸುವ ಯತ್ನ ನಡೆಸಿರುವುದು ಬೆಳಕಿಗೆ ಬ೦ದಿದೆ. ಹೀಗಾಗಿ ಆರ್ಪಿಎಫ್ ಸಮಗ್ರ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಮಂಗಳವಾರವಷ್ಟೇ ಕಾಸರಗೋಡು ರೈಲು ನಿಲ್ದಾಣ ಸಮೀಪ ತಳಂಗರೆ ಪರಿಸರದಲ್ಲಿ ದುಷ್ಕರ್ಮಿಗಳು ಹಳಿಯಲ್ಲಿ ಕಲ್ಲುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ್ದು ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆಯಿರುವ ರೈಲು ಹಳಿಯಲ್ಲಿ ಬೃಹತ್ ಗಾತ್ರದ ಕಾಂಕ್ರೀಟ್ ತುಂಡುಗಳನ್ನಿರಿಸಲಾಗಿತ್ತು.ರೈಲ್ವೇ ಗಾರ್ಡ್ ಹಳಿಯಲ್ಲಿ ಕಾಂಕ್ರೀಟ್ ತುಂಡುಗಳನ್ನು ಇರಿಸಿರುವುದನ್ನು ಕಂಡು ಸಕಾಲದಲ್ಲಿ ಅದನ್ನು ಎತ್ತಿ ಬದಿಗೆ ಎಸೆದು ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದರು. ಸುಮಾರು 35 ಕಿಲೋ ತೂಕದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಲಾಗಿತ್ತು. ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉಪ್ಮಳ ಸನಿಹದ ಮುಟ್ಟಂ ಗೇಟ್ ಬಳಿ ಹಳಿಯಲ್ಲಿ ಬೃಹತ್ ಕಲ್ಲು ಪತ್ತೆಯಾಗಿದ್ದು, ಮ೦ಗಳೂರು-ಚೆನ್ನೈ ಮೈಲ್ ಎಕ್ಸ್ಪ್ರೆಸ್ ರೈಲಿನ ಲೊಕೋ ಪೈಲಟ್ ಗಮನಕ್ಕೆ ಬ೦ದ ಕಾರಣ ಭಾರೀ ಅವಘಡ ತಪ್ಪಿಹೋಗಿತ್ತು