ಮಂಗಳೂರು, ಆ 23 (DaijiworldNews/MS): ಅವಿಭಜಿತ ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಕ್ಷೀಣಗೊಂಡಿದ್ದರೂ ಕರಾವಳಿಯಲ್ಲಿ ಹಲವೆಡೆ ಸೋಮವಾರ ಸಂಜೆ ಮತ್ತು ರಾತ್ರಿ ಭಾರೀ ಮಳೆಯಾಗಿದೆ.
ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ಮತ್ತು ಮಂಗಳೂರಿನಲ್ಲಿ ಬಿಸಿಲು ಮತ್ತು ಮಳೆಯ ವಾತಾವರಣವಿತ್ತು. ಕೆಲವೆಡೆ ಮಳೆಯ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಹಾಗೂ ಸೋಮವಾರ ಹಗಲಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ.
ಬೈಂದೂರು, ಕಾರ್ಕಳ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು, ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಮೋಡ, ಬಿಸಿಲ ವಾತಾವರಣದ ನಡುವೆ ಸಾಧರಣ ಮಳೆಯಾಗಿದೆ.
ಇನ್ನು ಹವಾಮಾನ ಇಲಾಖೆ ಈಗಾಗಲೇ ಕರಾವಳಿಯಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಿದೆ.