ಮುಲ್ಕಿ, ಆ 22 (DaijiworldNews/SM): ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಕಟ್ಟಿಗೆ ಸಾಗಾಟದ ಟೆಂಪೋ ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಾಳು ಚಾಲಕನನ್ನು ಪಡುಬಿದ್ರೆ ನಿವಾಸಿ ಇಕ್ಬಾಲ್ (45)ಎಂದು ಗುರುತಿಸಲಾಗಿದೆ.
ಗಾಯಾಳು ಇಕ್ಬಾಲ್ ಪಡುಬಿದ್ರೆಯಿಂದ ಟೆಂಪೋದಲ್ಲಿ ಕಟ್ಟಿಗೆ ಹೇರಿಕೊಂಡು ಮುಲ್ಕಿ ಸಮೀಪದ ಕೋಲ್ನಾಡು ಸಮೀಪಿಸುತ್ತಿದ್ದಂತೆ ಟೆಂಪೋ ಹಿಂಬದಿಯ ಟಯರ್ ನ ಕಬ್ಬಿಣದ ರಾಡ್ ತುಂಡಾಗಿದ್ದು ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ಸಂದರ್ಭ ಚಾಲಕ ಇಕ್ಬಾಲ್ ರವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಟೆಂಪೋ ವನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅಪಘಾತ ವಲಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪದ ಅವ್ಯವಸ್ಥೆ ಕಾಡುತ್ತಿದ್ದು ಕತ್ತಲೆಯಲ್ಲಿ ಸಂಚಾರ ದುಸ್ತರವಾಗಿ ಪರಿಣಮಿಸಿದ್ದು ಕಳೆದ ದಿನದ ಹಿಂದೆ ಬೈಕ್ ಸವಾರನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದನು