ಉಡುಪಿ, ಆ 22 (DaijiworldNews/SM): ಉಡುಪಿ ನಗರಸಭೆ ಅಜ್ಜರಕಾಡು ವ್ಯಾಪ್ತಿಯ ಬ್ರಹ್ಮಗಿರಿ ವೃತ್ತದಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಇವರ ಪುತ್ಥಳಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಹಿಂದೂಮಹಾಸಭಾ ಮತ್ತು ಭಜಂಗದಳ ಉಡುಪಿ ಘಟಕದ ವತಿಯಿಂದ ಉಡುಪಿ ನಗರಸಭೆಗೆ ಮನವಿಯನ್ನು ಸಲ್ಲಿಸಲಾಯಿತು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ಅವರ ಪ್ರಾಧಾನ್ಯತೆಯನ್ನ ತಿಳಿಯಪಡಿಸುವ ಉದ್ದೇಶದೊಂದಿಗೆ ಸಮಸ್ತ ದೇಶ ಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದು ಈ ಬಗ್ಗೆ ನಗರ ಸಭೆಯ ಮೂಲಕ ಈ ಪುತ್ತಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸುವಂತೆ ಉಡುಪಿ ನಗರ ಸಭೆ ಅಧ್ಯಕ್ಷರಿಗೆ ಅಖಿಲ ಭಾರತ ಹಿಂದೂ ಸಭಾ ಮತ್ತು ಭಜರಂಗದಳ ಉಡುಪಿ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಭಾರತ ಸ್ವಾತಂತ್ರ್ಯಗೊಂಡು 75 ಸಂವತ್ಸರಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಗಿದ್ದ ವೀರ ಸಾವರ್ಕರ್ ಪುತ್ಥಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸಬೇಕು ಎಂದು ಭಜರಂಗದಳ ಮತ್ತು ಹಿಂದೂ ಮಹಾಸಭಾ ಆಗ್ರಹಿಸಿದೆ. ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಹಿಂದೂ ಮಹಾ ಸಭಾದ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್, ಬಜರಂಗದಳ ಅಧ್ಯಕ್ಷ ಉದಯ ಪೂಜಾರಿ, ರಾಮಕೃಷ್ಣ ಶೆಟ್ಟಿ, ಯೋಗೀಶ್ ಕುತ್ಪಾಡಿ, ಶೈಲೇಶ್ ದೇವಾಡಿಗ ಮತ್ತು ಇತರರು ಉಪಸ್ಥಿತರಿದ್ದರು.