ಉಡುಪಿ, ಆ 22 (DaijiworldNews/HR): ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂ.ಐ.ಟಿ) ಆಗಸ್ಟ್ 20 ರಂದು ಅಕ್ಷಯ ಉರ್ಜಾ ದಿವಸ್ ಅನ್ನು ಆಚರಿಸಿದ್ದು, ಉಡುಪಿ ಮತ್ತು ಬ್ರಹ್ಮಾವರದ ಸರ್ಕಾರಿ ಶಾಲೆಗಳ 400 ವಿದ್ಯಾರ್ಥಿಗಳಿಗೆ ಸೌರಶಕ್ತಿ ಮತ್ತು ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳ ಕುರಿತು ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಯಿತು.
ಕಾರ್ಯಾಗಾರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್ಗಳನ್ನು ಜೋಡಿಸಲು ತರಬೇತಿ ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಜೋಡಿಸಲಾದ ಸೋಲಾರ್ ಲ್ಯಾಂಪ್ಗಳನ್ನು ಶಾಲಾ ಶಿಕ್ಷಕರೊಂದಿಗೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಎನ್.ಕೆ.ಶಿವರಾಜ್ (ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಉಡುಪಿ), ಶ್ರೀಮತಿ ಜಾಹ್ನವಿ (ಶಿಕ್ಷಣಾಧಿಕಾರಿ, ಉಡುಪಿ), ಶ್ರೀ ಅಶೋಕ್ ಕಾಮತ್ (ಬ್ಲಾಕ್ ಶಿಕ್ಷಣಾಧಿಕಾರಿ, ಉಡುಪಿ), ಕಮಾಂಡರ್ ಡಾ. ಅನಿಲ್ ರಾಣಾ (ನಿರ್ದೇಶಕರು, ಎಂ.ಐ.ಟಿ), ಮತ್ತು ಡಾ. ಸೋಮಶೇಖರ ಭಟ್ (ಜಂಟಿ ನಿರ್ದೇಶಕರು, ಎಂ.ಐ.ಟಿ) ಸಭೆಯಲ್ಲಿ ಭಾಗವಹಿಸಿ ಶಕ್ತಿ ಸ್ವರಾಜ್ಯ ಸಂದೇಶವನ್ನು ಬಲಪಡಿಸಿದರು.
ಈ ಕಾರ್ಯಕ್ರಮವನ್ನು ಡಾ. ನರೇಶ ಮಣಿ, ಸಹ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ಫ್ಯಾಕಲ್ಟಿ ಸಂಯೋಜಕರು (VSO), ಮತ್ತು ಎಂ.ಐ.ಟಿ ಯ ವಿವಿಧ ವಿದ್ಯಾರ್ಥಿ ಕ್ಲಬ್ಗಳು
ಸಂಯೋಜಿಸಿದರು.
ಎಂ.ಐ.ಟಿ ಯ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ವಿಜೇಂದ್ರ ಪ್ರಭು ವೇದಿಕೆ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಂ.ಐ.ಟಿ ಯ ಡಾ. ಪ್ರವೀಣ್ ಕುಮಾರ್, ಡಾ. ಸುಚೇತಾ ಕೋಲೇಕರ್, ಡಾ. ಮೊಹಮ್ಮದ್ ಜುಬೇರ್, ಶ್ರೀ ಮನೋಜ್ ಉಪಸ್ಥಿತರಿದ್ದರು.