ಮಂಗಳೂರು, ಫೆ02(SS): ಕೆಲ ದಿನಗಳ ಹಿಂದೆ ಜನರ ಸಂಪರ್ಕಕ್ಕೆಂದು ಗ್ರಾಮಸ್ಥರ ನೆರವಿನಿಂದ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಮಂಗಳೂರಿನ ಉಳಿಯ ಪಾವೂರು ತಾತ್ಕಾಲಿಕ ಸೇತುವೆಯನ್ನು ತಡರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಉಳಿಯ ಪಾವೂರು ನೇತ್ರಾವತಿ ನದಿಯ ಮಧ್ಯೆ ನೂರು ಎಕರೆಯಷ್ಟು ಇರುವ ಒಂದು ಸಣ್ಣ ಪ್ರದೇಶವಾಗಿದೆ. ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಕೆಲ ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕೆಂದು ನಡೆಸಿಕೊಂಡು ಬಂದ ಹೋರಾಟಕ್ಕೆ ಬೆಲೆಯೇ ಸಿಕ್ಕಿರಿಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾವೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಇದೀಗ ಅದೇ ಸೇತುವೆಯನ್ನು ಕೆಲ ಕಿಡಿಗೇಡಿಗಳು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.
ಈ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಗೆ ನಡೆಯುತ್ತಿತ್ತು. ಈ ಬಗ್ಗೆ ಇಲ್ಲಿನ ನಾಗರಿಕರು ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳ ಹಿಂದೆ ದ್ವೀಪದಲ್ಲಿ ಅಧಿಕಾರಿಗಳ ಸಭೆ ನಡೆದಿತ್ತು. ಹೀಗಾಗಿ ಅಕ್ರಮ ಮರಳುಗಾರಿಕೆ ವಿರುದ್ಧ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಇದೀಗ ಅಕ್ರಮ ಮರಳುಗಾರಿಕೆ ಬಗ್ಗೆ ನೀಡಿದ ದೂರಿಗೆ ದುಷ್ಕರ್ಮಿಗಳು ಪ್ರತೀಕಾರ ತೀರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಡರಾತ್ರಿ ಸೇತುವೆ ಧ್ವಂಸಗೊಳಿಸಿದ್ದರಿಂದ ಜನರ ಸಂಪರ್ಕಕ್ಕೆ ತೊಂದರೆಯುಂಟಾಗಿದೆ. ಕಬ್ಬಿಣದಪೈಪ್ಮತ್ತುಹಲಗೆಬಳಸಿಗ್ರಾಮಸ್ಥರೇನಿರ್ಮಿಸಿರುವಸೇತುವೆಯಸಂಚಾರಹಗ್ಗದಮೇಲಿನನಡಿಗೆಯಂತಿದ್ದು, ವಿಸ್ತಾರವಾಗಿರುವನದಿಯನ್ನುದಾಟುವುದೇಸಾಹಸವಾಗಿತ್ತು. ಶಾಲಾಮಕ್ಕಳು, ಮಹಿಳೆಯರುಇದೇಹಲಗೆಯಲ್ಲಿಸಂಚರಿಸುತ್ತಿದ್ದು, ದುರಂತಕ್ಕೆಆಹ್ವಾನನೀಡುವಂತಿತ್ತು.
ಇದೀಗ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಖಾದರ್, ಎಸಿ ರವಿಚಂದ್ರ ನಾಯಕ್ ಹಾಗೂ ಕೊಣಾಜೆ ಮತ್ತು ಕಂಕನಾಡಿ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ.