ಬಂಟ್ವಾಳ, ಆ 22 (DaijiworldNews/HR): ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಭಾನುವಾರ ಕೂಡ ಹೆದ್ದಾರಿಯ ಕಲ್ಲಡ್ಕ, ಮೆಲ್ಕಾರ್, ಸೂರಿಕುಮೇರ್ ಭಾಗದಲ್ಲಿ ವಾಹನಗಳ ಸರತಿ ಸಾಲು ಕಂಡುಬಂದಿದೆ.
ಕಲ್ಲಡ್ಕ ಸಮೀಪ ಲಾರಿಯೊಂದು ಹೆದ್ದಾರಿಯಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಆಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಹಾಕಿಕೊಂಡಿತ್ತು.
ಇನ್ನು ಮೆಲ್ಕಾರಿನಲ್ಲಿ ಮುಡಿಪು ಭಾಗದ ರಸ್ತೆಯೂ ಹೆದ್ದಾರಿಯನ್ನು ಸೇರುವುದರಿಂದ ವಾಹನಗಳ ಅಡ್ಡಾದಿಡ್ಡಿ ಚಲನೆಯಿಂದ ಗೊಂದಲ ಉಂಟಾಗಿತ್ತು. ಹೆದ್ದಾರಿಯ ಪ್ರಮುಖ ಜಂಕ್ಷನ್ಗಳಲ್ಲಿ ಕ್ರಾಸ್ ರಸ್ತೆಗಳು ಇರುವುದರಿಂದ ಪ್ರತಿ ಜಂಕ್ಷನ್ಗಳಲ್ಲಿ ಅಂಡರ್ಪಾಸ್ ಕಾಮಗಾರಿ ನಡೆಯುತ್ತಿದ್ದು, ಅದರ ಮೇಲ್ಭಾಗಕ್ಕೆ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ 2-3 ಕ್ರೇನ್ಗಳು ಹೆದ್ದಾರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ.
ಮಳೆಯಿಂದಲೂ ಹೆದ್ದಾರಿಯಲ್ಲಿ ಹೊಂಡಗಳು ಕಾಣಿಸಿಕೊಳ್ಳುವುದ್ದು, ಇದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದೆ ಎನ್ನಲಾಗಿದೆ.