ಮಂಗಳೂರು, ಆ 21 (DaijiworldNews/SM): ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ್ದಾಗಿದೆ. ಆದರೆ ಮಂಗಳೂರು ನಗರದಲ್ಲಿ ಇದಕ್ಕೆ ವಿರುದ್ಧವಾಗಿರುವ ಘಟನೆಗಳೇ ಹೆಚ್ಚೆಚ್ಚು ಕಾಣಸಿಗುತ್ತಿವೆ. ಇದೀಗ ನಂತೂರು ಬಸ್ ನಿಲ್ದಾಣದ ಸರದಿ.
ಮಂಗಳೂರು ನಂತೂರು ಸಮೀಪದಲ್ಲಿರುವ ಬಸ್ನಿಲ್ದಾಣ ಈಗಲೋ, ಆಗಲೋ ಬೀಳುವ ಸ್ಥಿತಿದಲ್ಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ನಿರ್ವಹಣೆ ಇಲ್ಲದೇ ಕಂಬಗಳು, ತುಕು ಹಿಡಿದು, ಇದೀಗ ಬೀಳುವ ಸ್ಥಿತಿಯಲ್ಲಿದೆ. ಪಕ್ಕದಲ್ಲಿರುವ ಮರ ಬಸ್ ನಿಲ್ದಾಣಕ್ಕೆ ಬಿದ್ದಿರುವುದರಿಂದ ನಿಲ್ದಾಣ ಬೀಳುವ ಆತಂಕದಲ್ಲಿದೆ. ಅದರೆ ಪ್ರಯಾಣಿಕರು ಭಯದಲ್ಲಿಯೇ ಬಸ್ಗಾಗಿ ಕಾದುಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.
ಪ್ರಯಾಣಿಕರ ಹಿತ ಕಾಯಬೇಕಾದ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ನಮ್ಮನ್ನಾಳುವ ಜನಪ್ರತಿನಿಧಿಗಳು ಕಂಡು ಕಾಣದವರಂತೆ ಮೌನವಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾದ ಅನಿವಾರ್ಯತೆ ಇದೆ.