ಮಂಗಳೂರು, ಆ 21 (DaijiworldNews/HR): ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟರ್ಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಬೋಳೂರಿನಲ್ಲಿ ಶನಿವಾರ ಸಂಭವಿಸಿದೆ.
ಘಟನೆಯಲ್ಲಿ 2 ಸ್ಕೂಟರ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಮತ್ತೆರಡು ಸ್ಕೂಟರ್ಗಳಿಗೆ ಭಾಗಶಃ ಹಾನಿಯಾಗಿದೆ.
ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್ಗಳನ್ನು ಬೋಳೂರಿನ ಹಾಲಿನ ಬೂತ್ ಬಳಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾರ್ಜಿಗೆ ಇಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಕೂಟರ್ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಎರಡು ಸ್ಕೂಟರ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಇನ್ನು ಸ್ಥಳೀಯರ ಪ್ರಯತ್ನದಿಂದಾಗಿ ಇನ್ನೆರಡು ಸ್ಕೂಟರ್ಗಳನ್ನು ದೂರಕ್ಕೆ ತರಲಾಗಿದ್ದು, ಅಷ್ಟರಲ್ಲೇ ಅವುಗಳಿಗೂ ಭಾಗಶಃ ಹಾನಿಯಾಗಿದೆ. ಸ್ಕೂಟರ್ಗಳು ಬೆಂಕಿಗಾಹುತಿ ಆಗಿರುವುದರಿಂದ ಒಟ್ಟು ಅಂದಾಜು 4 ಲ.ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.