ಮಂಗಳೂರು ,ಆ 20 (DaijiworldNews/MS): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರತ್ಕಲ್ ಎನ್ ಐಟಿಕೆ ಬಳಿ ಇರುವ ಟೋಲ್ಗೇಟ್ ಸಮೀಪದಲ್ಲಿರುವ ಹೆಜಮಾಡಿ ಮತ್ತು ತಲಪಾಡಿ ಟೋಲ್ ಗೇಟ್ಗಳೊಂದಿಗೆ ವಿಲೀನಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ಮಾತ್ರ ವಿಲೀನಗೊಳಿಸಿದರೆ ವಾಹನ ಮಾಲೀಕರು ಮತ್ತು ಚಾಲಕರು ಟೋಲ್ ಗೆ ದುಪ್ಪಟ್ಟು ದರ ನೀಡಬೇಕಾಗಿದ್ದು, ಇದು ಮತ್ತೆ ಪ್ರತಿಭಟನೆಗೆ ಕಾರಣವಾಗಲಿದೆ. ಹೀಗಾಗಿ ಹೆಜಮಾಡಿ ಮತ್ತು ತಲಪಾಡಿಯ ಎರಡು ಟೋಲ್ ಗೇಟ್ಗಳಿಂದ ಟೋಲ್ ಶುಲ್ಕವನ್ನು ಹಂಚಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕೆಲ ವರ್ಷಗಳಿಂದ ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಇತ್ತೀಚೆಗೆ ಕೇಂದ್ರ ಸಚಿವ ಗಡ್ಕರಿ ಅವರು ಪರಸ್ಪರ 60 ಕಿಮೀ ಅಂತರದಲ್ಲಿರುವ ಎಲ್ಲಾ ಟೋಲ್ಗೇಟ್ಗಳು ಕಾನು ಬದ್ದವಲ್ಲ , ಹೀಗಾಗಿ ಅದನ್ನು ಹಿಂಪಡೆಯುವುದಾಗಿ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು.