ಉಡುಪಿ, ಆ 20 (DaijiworldNews/MS): ಆನ್ಲೈನ್ ವ್ಯವಹಾರದಲ್ಲಿ ವಂಚನೆಗೊಳಗಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಇಲ್ಲಿನ ಸ್ಥಳೀಯ ನಿವಾಸಿ ಪೂರ್ಣಿಮಾ ಅವರಿಗೆ ನ್ಯಾಪ್ಟಲ್ ಕಂಪನಿಯಿಂದ ಪೋಸ್ಟ್ ಮೂಲಕ ಸ್ಕ್ರ್ಯಾಚ್ - ವಿನ್ ಕೂಪನ್ ಬಂದಿದ್ದು ಅದರಲ್ಲಿ 14.8 ಲಕ್ಷ ರೂಪಾಯಿ ವಿಜೇತರಾಗಿದ್ದೀರಿ ಎಂದು ನಮೂದಿಸಲಾಗಿತು. ಕೂಪನ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಪೂರ್ಣಿಮಾ ಸಂಪರ್ಕಿಸಿದಾಗ, ತನ್ನನ್ನು ಆನಂದ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಂಬಿಕೆ ಬರಿಸುವಂತೆ ಮಾತನಾಡಿಸೇವಾ ಶುಲ್ಕ, ಸರ್ಚ್ ಚಾರ್ಜ್, ಎನ್ಒಸಿ ಮತ್ತು ಎಲ್ಒಸಿ ಶುಲ್ಕ, ಭದ್ರತಾ ಠೇವಣಿ, ಜಿಎಸ್ಟಿ ಮತ್ತು ಕೇಂದ್ರ ತೆರಿಗೆಗಳು ಬೇಕಾಗುತ್ತವೆ ಎಂದು ಹೇಳಿ ಆನಂದ್ ಪೂರ್ಣಿಮಾ ಅವರಿಂದ ಮೇ 20 ರಿಂದ ಆಗಸ್ಟ್ 12 ರವರೆಗೆ ವಿವಿಧ ಬ್ಯಾಂಕ್ ಖಾತೆಗೆ 15.33 ಲಕ್ಷ ರೂ.ಜಮೆ ಮಾಡಿಸಿಕೊಂಡಿದ್ದಾನೆ
ವಿಜೇತ ಹಣವನ್ನು ನೀಡದೆ ಹಾಗೂ ಕಟ್ಟಿದ ಹಣವೂ ವಾಪಾಸ್ ನೀಡದೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಿ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.