ಉಡುಪಿ, ಆ 19 (DaijiworldNews/SM):ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ನೈಸರ್ಗಿಕ ವಿಪತ್ತುಗಳ ಬಗ್ಗೆ ತಿಳಿಯಲು ಹೋಗಿದ್ದರು. ಸಿದ್ದರಾಮಯ್ಯನವರಿಗೆ ಅವಮಾನಕರವಾಗಿ ಕಪ್ಪು ಭಾವುಟ ತೋರಿಸಿ ಮೊಟ್ಟೆ ಎಸೆದಿದ್ದಾರೆ. ಇಂತಹ ಘಟನೆ ರಾಜ್ಯದಲ್ಲಿ ಪ್ರಥಮವಾಗಿದ್ದು, ಉದ್ದೇಶಪೂರ್ವಕ ತಡೆಯೊಡ್ಡಿದ್ದಾರೆ. ಈ ಸಂದರ್ಭದಲ್ಲಿ ಇವರ ಇಂಟಲಿಜೆನ್ಸ್ ಏನು ಮಾಡುತ್ತಿತ್ತು ಗೃಹ ಸಚಿವರು ಏನು ಮಾಡುತ್ತಿದ್ದರು? ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊಟ್ಟೆ ಎಸೆಯುವ ಕರಿಪತಾಕೆ ಹಿಡಿಯುವ ಶಕ್ತಿ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗೆ ಸರಿಸಮನರಾಗಿದ್ದು, ಇವರ ಇಂಟಲಿಜೆನ್ಸ್ ಏನು ಮಾಡುತ್ತಿತ್ತು ಗೃಹ ಸಚಿವರು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ. ಪ್ರತಾಪ ಸಿಂಹ ಭಾವನಾತ್ಮಕ ವಿಚಾರ ಮಾತ್ರ ಮಾತನಾಡುತ್ತಾರೆ. ಶಾಶ್ವತ ಪರಿಹಾರದ ಬಗ್ಗೆ ಒಂದೇ ಒಂದು ಕಾರ್ಯಕ್ರಮ ಇಲ್ಲ. ಎರಡು ಮೂರು ತಿಂಗಳಿಗೊಮ್ಮೆ ಕೊಡಗಿಗೆ ಬಂದು ಹೇಳಿಕೆ ಕೊಟ್ಟು ಹೋಗುತ್ತಾರೆ. ಈ ಘಟನೆಗೆ ಖಂಡನೆ, ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಜರುಗಿಸಲೇಬೇಕು ಎಂದರು.
ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆಯಾಗಿದೆ. ಕೊಡಗು ವಿಪತ್ತಿನಿಂದ ತತ್ತರಗೊಂಡಿದೆ, ಜನರಲ್ಲಿ ಆತಂಕ ಮನೆಮಾಡಿದೆ. ದೂರದೃಷ್ಟಿ ಇಲ್ಲದೆ ಡಿಸಿ ಕಚೇರಿ ಗುಡ್ಡದ ಮೇಲೆ ಕಟ್ಟಿದ್ದಾರೆ. ಐದು ಕೋಟಿಯ ಡಿಸಿ ಕಚೇರಿಗೆ ಏಳುಕೋಟಿ ತಡೆಗೊಡೆಗೆ ಕಟ್ಟಿದ್ದಾರೆ. ಶಾಶ್ವತ ಪರಿಹಾರಕ್ಕೆ ಈ ಸರಕಾರ ಯಾವುದೇ ಕೆಲಸ ಮಾಡಿಲ್ಲ. ಮುಖ್ಯಮಂತ್ರಿಗಳು ಸಮರ್ಪಕ ತಪಾಸಣೆ ಮಾಡಿಲ್ಲ, ತಾತ್ಕಾಲಿಕ ಚೆಕ್ ಕೊಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳು ಕ್ರಮಕೈಗೊಂಡಿಲ್ಲ...ವಿಪಕ್ಷ ನಾಯಕರು ಹೋದಾಗ ಅಡ್ಡಿ ಮಾಡಿದ್ದಾರೆ. ಶಾಶ್ವತ ಪರಿಹಾರಕ್ಕೆ ಒತ್ತುನೀಡಲು ಆಗ್ರಹಿಸಿ ಸಿದ್ದರಾಮಯ್ಯ ಹೋಗಿದ್ದರು ಎಂದರು.