ಉಡುಪಿ, ಆ 19(DaijiworldNews/HR): ಸಿದ್ಧರಾಮಯ್ಯನವರಿಗೆ ಕುಂಕುಮ ಇಟ್ಟವರನ್ನ ಕಂಡರೆ ಆಗುವುದಿಲ್ಲ, ಸಾವರ್ಕರ್ ಫೋಟೋ ಕಂಡರೆ ಆಗಲ್ಲ, ಈ ರೀತಿಯ ಪ್ರತ್ಯೇಕತೆಯ ಭಾವನೆಗಳನ್ನು ತಮ್ಮ ನಡುವಳಿಕೆಗಳಲ್ಲಿ ಹೇಳಿಕೆಗಳಲ್ಲಿ ಆಡಳಿತದಲ್ಲಿ ಕೊಡ್ತಾ ಕೊಡ್ತಾನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಂತರ ಸೃಷ್ಟಿಯಾಗಲು ಕಾರಣವಾಗಿದೆ. ಹೇಳಿಕೆ ಕೊಡಬೇಕಾದರೆ ಪ್ರತಿಭಟನೆ ಸಹಿಸಿಕೊಳ್ಳುವ ಶಕ್ತಿಯೂ ಬೇಕು. ಸುಮ್ ಸುಮ್ನೆ ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುವ ಕಾಲ ಹೊರತು ಹೋಗಿದೆ, ಎಂದು ಸಿದ್ದರಾಮಯ್ಯಗೆ ಮೊಟ್ಟೆ ಎಸೆದು ಪ್ರತಿಭಟಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇವತ್ತು ಸಿದ್ಧರಾಮಯ್ಯ ಸಾವರ್ಕರ್ ಬಗ್ಗೆ ಅಷ್ಟು ಅವಹೇಳನಕಾರಿಯಾಗಿ ಮಾತನಾಡಬೇಕಾದರೆ ಇವತ್ತಿನ ಯುವ ಸಮುದಾಯ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿರಲು ಸಾಧ್ಯವಿಲ್ಲ, ಇದನ್ನ ಕರ್ನಾಟಕ ಜನತೆ ತಡೆಯೋಕೇ ಆಗಲ್ಲ ಅನ್ನುವ ಕಾರಣಕ್ಕೆ ಪ್ರತಿಭಟನೆಗಳು ಆಗುತ್ತಿವೆ ಎಂದರು.
ಇನ್ನು ಸಾವರ್ಕರ್ ಗೆ ವೀರ ಸಾವರ್ಕರ್ ಎಂಬ ಹೆಸರು ಅವರ ಹೋರಾಟದ ಕಾರಣಕ್ಕೆ ಬಂದಿದೆ. ಅವರ ಇತಿಹಾಸದ ಬಗ್ಗೆ ಇಷ್ಟೊಂದು ಹಗುರವಾಗಿ ಇಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದರೆಂದರೆ ಅವರ ಬಗ್ಗೆ ಅರ್ಧಂಬರ್ಧ ಮಾತ್ರ ಗೊತ್ತಿದೆ. ಪೂರ್ತಿ ಗೊತ್ತಿದ್ರೆ ಇಷ್ಟೊಂದು ಮಾತನಾಡಲು ಸಧ್ಯ ಆಗ್ತಿರ್ಲಿಲ್ಲ. ಅಂತಸತ್ವ ಯಾರಿಗಿಲ್ವೋ ಅವರ್ಯಾರಿಗೂ ಈ ರೀತಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಲು ಬರುವುದಿಲ್ಲ. ಸಿದ್ದರಾಮಯ್ಯ ಒಮ್ಮೆ ಅಂಡಮಾನ್ ಸೆಲ್ಯುಲರ್ ಜೈಲು ನೋಡ್ಕೊಂಡು ಬರಲಿ. ಆಮೇಲೆ ಸಾವರ್ಕರ್ ಬಗ್ಗೆ ಮಾತನಾಡಲಿ ಎಂದಿದ್ದಾರೆ.
ನೀವು ಸಮಾಜವಾದಿ ಅಂದುಕೊಂಡು ಲಕ್ಷಾಂತರ ಜನರ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಮಾಡುತ್ತ ಮೋಜು ಮಾಡಿದಂತವರು. ಸಾವರ್ಕರ್ ಇದ್ದನಂತಹ ಜೈಲು ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ. ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅಂತ ಶಿಕ್ಷೆ ಅನುಭವಿಸಿದವನಿಗೇ ಗೊತ್ತಿದೆ ಎಂದರು.
ರಾಜ್ಯಾದ್ಯಂತ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವಿಚಾರಕ್ಕೆ ಉತ್ತರಿಸಿದ ಸುನಿಲ್, ಇಂತಹ ವಿದ್ಯಮಾನಗಳು ಇನ್ನಷ್ಟು ಜಾಸ್ತಿ ಆಗುತ್ತೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಬಗ್ಗೆ ಅವ ಹೇಳನಕಾರಿಯಾಗಿ ಮಾತನಾಡಿದರೆ, ಮೆರವಣಿಗೆಗಳು, ಕಾರ್ಯಕ್ರಮಗಳು, ಬ್ಯಾನರ್ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕ ಆಗಲಿದೆ. ಸಾವರ್ಕರ್ ಹೆಸರು ಮುನ್ನಲೆಗೆ ಬರಲು ಸಿದ್ದರಾಮಯ್ಯನವರೇ ಕಾರಣವಾಗಿದ್ದಾರೆ ಎಂದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಆಕ್ಷೇಪ ವಿಚಾರವಾಗಿ ಮಾತನಾಡುತ್ತ, 'ದೇಶದ ಸಂಪ್ರದಾಯ ಪರಂಪರೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ಅನಗತ್ಯವಾಗಿ ವಿವಾದ ಮಾಡಬೇಡಿ. ಸರ್ಕಾರಿ ಶಾಲೆಗಳಲ್ಲಿ ಸಹಜವಾಗಿಯೇ ಸಾರ್ವಜನಿಕ ಗಣೇಶ ಉತ್ಸವಗಳು ನಡೆಯುತ್ತೆ. ಶಾಲೆಯ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ನಮ್ಮ ಸರಕಾರ ಸಹಿಸಿಕೊಳ್ಳುವುದಿಲ್ಲ. ನಮಾಜ್ಗೆ ಶಾಲೆ ಆವರಣದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ ಎಂದರು.
ಆರ್ಎಸ್ಎಸ್ ನಿಂದ ಸಿದ್ದರಾಮಯ್ಯಗೆ ಜೀವ ಬೆದರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನೀಲ್, ನಮಗೆ ಹಿಂಸೆಯ ಮೇಲೆ ಯಾವತ್ತು ನಂಬಿಕೆ ಇಲ್ಲ ನಾವು ಹಿಂಸೆಯನ್ನು ಯಾವತ್ತೂ ಒಪ್ಪಿಲ್ಲ, ಹಿಂದೂ ಸಂಘಟನೆಗಳಿಂದ ಸಿದ್ದರಾಮಯ್ಯಗೆ ಜೀವ ಬೆದರಿಕೆ ಇದೆ. ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಮಾಡಿರುವ ಆರೋಪಕ್ಕೆ ಉತ್ತರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೀವ ಬೆದರಿಕೆ -ಭಯ ಇದ್ದರೆ ಸಿದ್ದರಾಮಯ್ಯ ದೂರು ಕೊಡಲಿ. ಸರಕಾರ ಭದ್ರತೆ ಕೊಟ್ಟಿದೆ ಇನ್ನಷ್ಟು ಕೊಡಲಿದೆ ಎಂದು ಹೇಳಿದ್ದಾರೆ.