ಮಂಗಳೂರು, ಆ 19(DaijiworldNews/HR): ಜಾರ್ಖಂಡ್ ಮೂಲದ ಯುವಕನೊಬ್ಬ ಸುರತ್ಕಲ್ ಬಳಿ ಕತ್ತಿ ಬೀಸಿ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾರ್ಖಂಡ್ ಮೂಲದ ಅತುಲ್ ಕಲ್ಲು (30) ಎಂಬಾತ ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ, ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದು ಸಾರ್ವಜಕನರ ಜೊತೆ ಒರಟಾಗಿ ವರ್ತಿಸಿದ್ದಾನೆ. ವೆಂಕಪ್ಪ ಎಂಬ ಸ್ಥಳೀಯ ಒಬ್ಬರನ್ನು ಬೆದರಿಸಿ ಅವರ ಬಳಿಯಿದ್ದ ಕತ್ತಿಯನ್ನು ಪಡೆದು ಅದನ್ನು ಬೀಸುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದಾನೆ.
ಇನ್ನು ಇದೇ ವೇಳೆ ಗ್ಯಾರೇಜ್ ನಡೆಸುತ್ತಿದ್ದ ಇಮ್ರಾನ್ ಎಂಬವರ ಮೇಲೆ ಕತ್ತಿ ಬೀಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಸಾರ್ವಜನಿಕರು ಜಾರ್ಖಂಡ್ ಮೂಲದ ಯುವಕನನನ್ನು ಹಿಡಿದು ಥಳಿಸಿದ್ದು, ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.