ಉಡುಪಿ, ಆ 19 (DaijiworldNews/DB): ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿ ಬ್ರಹ್ಮಗಿರಿ ಸರ್ಕಲ್ನಲ್ಲಿ ಹಾಕಲಾಗಿದ್ದ ಸಾವರ್ಕರ್ ಫೋಟೋವಿದ್ದ ಬ್ಯಾನರ್ನ್ನು ಅನುಮತಿ ಅವಧಿ ಮುಗಿಯುವ ಮುನ್ನವೇ ಹಿಂದೂ ಮುಖಂಡರು ತೆರವುಗೊಳಿಸಿದ್ದಾರೆ.
ಉಡುಪಿ ಅಷ್ಟಮಿ ಹಿನ್ನೆಲೆಯಲ್ಲಿ ಪೊಲೀಸರ ಜವಾಬ್ದಾರಿ ಹಗುರಗೊಳಿಸಲು ಬ್ಯಾನರ್ ತೆಗೆಯಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿ ಹಿಂದೂ ಮಹಾಸಭಾ ನಾಯಕರು ಬ್ರಹ್ಮಗಿರಿ ಸರ್ಕಲ್ನಲ್ಲಿ ಬ್ಯಾನರ್ ಅಳವಡಿಕೆ ಮಾಡಿದ್ದರು. ಅಲ್ಲದೆ 15 ದಿನಗಳ ಕಾಲ ಈ ಬ್ಯಾನರ್ ಸರ್ಕಲ್ನಲ್ಲಿರಲು ಅನುಮತಿ ಕೋರಲಾಗಿತ್ತು. ಆದರೆ ಇದೀಗ ಅನುಮತಿ ಅವಧಿ ಮುನ್ನವೇ ಹಿಂದೂ ಮುಖಂಡರು ಬ್ಯಾನರ್ನ್ನು ತೆರವುಗೊಳಿಸಿದ್ದಾರೆ.
ಉಡುಪಿ ಅಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡುವ ಮತ್ತು ಪೊಲೀಸರ ಜವಾಬ್ದಾರಿ ಹಗುರಗೊಳಿಸುವ ದೃಷ್ಟಿಯಿಂದ ಬ್ಯಾನರ್ ತೆರವು ಮಾಡಲಾಗಿದೆ ಎಂದು ಇದೇ ವೇಳೆ ಮುಖಂಡರು ತಿಳಿಸಿದ್ದಾರೆ. ಬ್ರಹ್ಮಗಿರಿ ಸರ್ಕಲ್ನಿಂದ ಹುತಾತ್ಮ ಸ್ಮಾರಕದವರೆಗೆ ಮೆರವಣಿಗೆಯಲ್ಲಿ ಬ್ಯಾನರ್ ತಂದು ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪುತ್ಥಳಿ ಸ್ಥಾಪನೆಗೆ ಅನುಮತಿ ಕೋರಿ ನಗರಸಭೆ, ಜಿಲ್ಲಾಡಳಿತಕ್ಕೆ ಮನವಿ ನೀಡಲಾಗುವುದು ಎಂದು ಇದೇ ವೇಳೆ ಸಂಘಟನೆಗಳ ಪ್ರಮುಖರು ತಿಳಿಸಿದರು.